Site icon Kannada News-suddikshana

STOCK MARKET: ಲಾಭಾಂಶ ಹಿಂತೆಗೆತ: ಇಳಿಕೆ ಕಂಡ ಷೇರುಪೇಟೆ

SUDDIKSHANA KANNADA NEWS\ DAVANAGERE\ DATE:08-12-2023

STOCK MARKET: ಲಾಭಾಂಶ ಹಿಂತೆಗೆತ: ಇಳಿಕೆ ಕಂಡ ಷೇರುಪೇಟೆ

ಸತತ ಏರುಗತಿಯಲ್ಲಿ ಸಾಗುತ್ತಿದ್ದ ಭಾರತೀಯ ಷೇರುಪೇಟೆ ಗುರುವಾರ ಇಳಿಕೆ ಕಂಡಿದೆ. ಸಂವೇದಿ ಸೂಚ್ಯಂಕವು ಸಾರ್ವಕಾಲಿಕ ಎತ್ತರದಲ್ಲಿರುವುದರಿಂದ
ಹೂಡಿಕೆದಾರರು ಲಾಭಾಂಶ ಹಿಂತೆಗೆತಕ್ಕೆ ಮುಂದಾದರು.
ಇದರಿಂದಾಗಿ ಷೇರುಗಳು ಹೆಚ್ಚು ಮಾರಾಟದ ಒತ್ತಡಕ್ಕೆ ಒಳಗಾದವು. ಅಂತಿಮವಾಗಿ ಸೂಚ್ಯಂಕಗಳು ಇಳಿಕೆ ದಾಖಲಿಸಿದವು.

ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ -36.55 (-0.17%)
ಅಂಕ ಇಳಿಕೆ ಕಂಡು 20,937.70 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -132.04 (-0.18%) ಅಂಕ ಇಳಿಕೆ ಕಂಡು 69,521.69 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.

*ಏರಿಕೆ ಕಂಡ ಷೇರುಗಳು*

ನಿಫ್ಟಿಯಲ್ಲಿ ADANIPORTS, POWERGRID, ULTRACEMCO, CIPLA, NTPC ಷೇರುಗಳು ಜಿಗಿತ ಕಂಡವು.

*ಇಳಿಕೆ ಕಂಡ ಷೇರುಗಳು*

ನಿಫ್ಟಿಯಲ್ಲಿ BHARTIARTL, HINDUNILVR, APOLLOHOSP, ONGC, TATASTEEL ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.

*ಕರೆನ್ಸಿ ವಹಿವಾಟು*

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.35 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.

*FII ಮತ್ತು DII ನಗದು ವಹಿವಾಟು ವಿವರ*

ಮಾರುಕಟ್ಟೆ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-1,564.03 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.-9.66 ಕೋಟಿ ನಿವ್ವಳ ಮಾರಾಟ ಮಾಡಿದ್ದಾರೆ.

ಗಿರೀಶ್ ಕೆ ಎಂ

Exit mobile version