Site icon Kannada News-suddikshana

ಇಂದು ಷೇರುಪೇಟೆಯಲ್ಲಿ ದೀಪಾವಳಿಯ ವಿಶೇಷ ವಹಿವಾಟು: ಮುಹೂರ್ತ ಟ್ರೇಡಿಂಗ್‌ ವಿಶೇಷತೆ ತಿಳಿಯೋಣ ಬನ್ನಿ

SUDDIKSHANA KANNADA NEWS/ DAVANAGERE/ DATE:12-11-2023

ಬೆಳಕಿನ ಹಬ್ಬ ದೀಪಾವಳಿ. ಈ ದೀಪಾವಳಿ ಹಬ್ಬವು ಕತ್ತಲೆಯನ್ನು ಹೊಡೆದೋಡಿಸಿ ಬೆಳಕು ಹರಡುವ ಹಬ್ಬವಾಗಿದೆ.

ಷೇರುಪೇಟೆಯಲ್ಲಿ ದೀಪಾವಳಿ ಹಬ್ಬದಂದು ಒಂದು ಗಂಟೆಯವರೆಗೆ ವಿಶೇಷವಾದ ವಹಿವಾಟನ್ನು ನಡೆಸಲಾಗುತ್ತದೆ. ಇದನ್ನೇ “ಮುಹೂರ್ತ ಟ್ರೇಡಿಂಗ್‌” ಎಂದು ಕರೆಯಲಾಗುತ್ತದೆ.

ಮುಹೂರ್ತ ಟ್ರೇಡಿಂಗ್‌ ವಿಶೇಷತೆ

ದೀಪಾವಳಿ ಹಬ್ಬದಂದು ಭಾರತೀಯ ಷೇರು ವಿನಿಮಯ ಕೇಂದ್ರವು ಪ್ರತಿ ವರ್ಷ ಒಂದು ಗಂಟೆಗಳ ಕಾಲ ಮುಹೂರ್ತ ಟ್ರೇಡಿಂಗ್‌ ಸಮಯವನ್ನು ನಿಗದಿ ಪಡಿಸುತ್ತದೆ. ಈ ಸಮಯದಲ್ಲಿ ಷೇರು ಹೂಡಿಕೆ ಮಾಡುವುದರಿಂದ ಶುಭವಾಗುತ್ತದೆ ಎಂಬುದು ಹೂಡಿಕೆದಾರರ ನಂಬಿಯಾಗಿದ್ದು, ಇದರಿಂದ ವರ್ಷವಿಡೀ ಸಂಪತ್ತು, ಸಮೃದ್ಧಿ ಗಳಿಸುವ ಉತ್ತಮ ಅವಕಾಶ ದೊರೆಯುತ್ತದೆ ಎಂಬುದು ಹೂಡಿಕೆದಾರರು ನಂಬಿದ್ದಾರೆ.

ದೀಪಾವಳಿ ಹಬ್ಬದ ದಿನ ಸಂಜೆಯ ವೇಳೆಗೆ ನಡೆಯುವ ಈ ಮುಹೂರ್ತ ಟ್ರೇಡಿಂಗ್‌ ವ್ಯವಹಾರ ನಡೆಯುತ್ತದೆ. ಹಬ್ಬದಂದು ಲಕ್ಷ್ಮೀದೇವಿಯ ಆಗಮನದ ಸಂಕೇತವಾಗಿ ಹೆಚ್ಚಿನ ಹೂಡಿಕೆದಾರರು ಈ ಶುಭ ಸಮಯದಲ್ಲಿ ಷೇರುಗಳ ಖರೀದಿ/ ಮಾರಾಟ ಮಾಡುತ್ತಾರೆ. ಇದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಾತ್ರ ನಡೆಯುವ ವ್ಯವಹಾರವಾಗಿರುವುದು ವಿಶೇಷವಾಗಿದೆ.

ಮುಹೂರ್ತ ಟ್ರೇಡಿಂಗ್‌ ಸಮಯ:

ದೀಪಾವಳಿಯಂದು ಎನ್‌ಎಸ್‌ಇ (ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌) ಹಾಗೂ ಬಿಎಸ್‌ಇ (ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌) ಎರಡು ಷೇರು ವಿನಿಮಯ ಕೇಂದ್ರಗಳು ಸೀಮಿತ ಅವಧಿವರೆಗೆ ವ್ಯಾಪಾರವನ್ನು ನಡೆಸಲು ವಿಶೇಷ ಅನುಮತಿ ನೀಡುತ್ತದೆ. ಈ ವರ್ಷದ ದೀಪಾವಳಿಯ ಮುಹೂರ್ತ ವ್ಯವಹಾರ ನವೆಂಬರ್‌ 12ರ ಭಾನುವಾರ ನಡೆಯಲಿದೆ.

ಪ್ರಿ ಓಪನ್‌ ಸೆಷನ್‌: ಸಂಜೆ 6 ರಿಂದ 6.08 ರವರೆಗೆ ನಡೆಯಲಿದೆ.
ಮುಹೂರ್ತ ಟ್ರೇಡಿಂಗ್‌: 6.15 ರಿಂದ 7.15
ಪೋಸ್ಟ್‌ ಕ್ಲೋಸ್‌ ಸೆಷನ್‌: 7.30 ರಿಂದ 7.38
ಮಾರ್ಕೇಟ್‌ ಕ್ಲೋಸ್‌: ಸಂಜೆ 7.40 ರವರೆಗೆ ನಡೆಯಲಿದೆ.

ಹೂಡಿಕೆದಾರರು ಈ ದೀಪಾವಳಿಯ ಸಮಯದಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಿ ಷೇರು ವ್ಯವಹಾರಕ್ಕೆ ತೊಡಗುತ್ತಾರೆ. ಇದರಿಂದ ಸಂಪತ್ತು ಇನ್ನಷ್ಟು ಹೆಚ್ಚಬಹುದು ಎಂಬುದು ನಂಬಿಕೆ ಇದೆ.

ಈ ದೀಪಾವಳಿಯ ಶುಭ ಸಂದರ್ಭದಲ್ಲಿ ನೀವೂ ಕೂಡ ವ್ಯವಹಾರ ಮಾಡುತ್ತೀರಾ ಅಲ್ವಾ!!!

– ಗಿರೀಶ್ ಕೆ ಎಂ

Exit mobile version