Site icon Kannada News-suddikshana

ಏರಿಕೆ ಕಂಡ ಷೇರುಪೇಟೆ (STOCK MARKET): ನಿಫ್ಟಿ114 ಅಂಕ, ಸೆನ್ಸೆಕ್ಸ್ 320 ಅಂಕ ಏರಿಕೆ

STOCK MARKET

STOCK MARKET

SUDDIKSHANA KANNADA NEWS/ DAVANAGERE/ DATE:29-09-2023

ಗಿರೀಶ್ ಕೆ ಎಂ

 

ಇಂದು ಭಾರತೀಯ ಷೇರುಪೇಟೆ(Stock market)ಯಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಸೂಚ್ಯಂಕಗಳು ಏರಿಕೆ ಕಂಡಿವೆ. ನೆನ್ನೆ ತೀವ್ರ ತರಹದ ಕುಸಿತಕ್ಕೆ ಒಳಗಾಗಿದ್ದ ಮಾರುಕಟ್ಟೆ ಇಂದು ಚೇತರಿಸಿ ಕೊಂಡಿದೆ.

ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ +114.75 (0.59%)ಅಂಕ ಏರಿಕೆ ಕಂಡು 19,638.30 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 320.09 (0.48%) ಅಂಕ ಏರಿಕೆ ಕಂಡು 65,828.41 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.

ಈ ಸುದ್ದಿಯನ್ನೂ ಓದಿ: 

Davanagere:ಮೋದಿ ಪ್ರಭಾವ ಬೀರದು, ಬಿಜೆಪಿ ಸಂಸದರಿಂದ 30 ವರ್ಷ ದಾವಣಗೆರೆ ಅಭಿವೃದ್ಧಿಯಾಗಲೇ ಇಲ್ಲ: ಸಿದ್ದೇಶ್ವರಗೆ ಜಿ. ಬಿ. ವಿನಯ್ ಕುಮಾರ್ ಟಾಂಗ್

ಏರಿಕೆ ಕಂಡ ಷೇರುಗಳು:

ಇಂದು ನಿಫ್ಟಿಯಲ್ಲಿ HINDALCO, NTPC,DRREDDY,HEROMOTOCO, TATAMOTORS ಷೇರುಗಳು ಜಿಗಿತ ಕಂಡವು.

ಇಳಿಕೆ ಕಂಡ ಷೇರುಗಳು:

ನಿಫ್ಟಿಯಲ್ಲಿ ADANIENT, LTIM, INFY, HCLTECH,NESTLEIND ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.

ಕರೆನ್ಸಿ ವಹಿವಾಟು:

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.08 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.

FII ಮತ್ತು DII ನಗದು ವಹಿವಾಟು ವಿವರ:

ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ. -1,685.70 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.2,751.49 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.

 

Exit mobile version