SUDDIKSHANA KANNADA NEWS/ DAVANAGERE/ DATE:12-10-2023
ಗಿರೀಶ್ ಕೆ ಎಂ
ಭಾರತೀಯ ಷೇರು ಮಾರುಕಟ್ಟೆ (Stock market)ಯಲ್ಲಿ ಏರಿಳಿತ ಜೋರಾಗಿದ್ದು, ದಿನದ ಅಂತ್ಯಕ್ಕೆ ಅಲ್ಪ ಕುಸಿತ ಕಂಡಿದೆ. ಆರಂಭದಿಂದಲೂ ಸೂಚ್ಯಂಕಗಳು ಏರಿಕೆಯಲ್ಲಿದ್ದವು. ವಹಿವಾಟಿನ ನಡುವೆ ತೀವ್ರ ತರಹದ ಮಾರಾಟಕ್ಕೆ ಒಳಗಾಯಿತು.
Read Also This Story:
ಪ್ರಾರಂಭವಾಗದ, ಹೊಸ ಕಾಮಗಾರಿಗಳ ಬಗ್ಗೆ ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ
ಐಟಿ ಕ್ಷೇತ್ರದ ದಿಗ್ಗಜ ಟಿಸಿಎಸ್ ತನ್ನ ತ್ರೈಮಾಸಿಕದ ವರದಿ ನೀಡಿದ್ದು, ಹೂಡಿಕೆದಾರರಿಗೆ ಆಕರ್ಶಿಸಲಿಲ್ಲ. ಅದೇ ರೀತಿ ಇಂದು ಇನ್ಫೋಸಿಸ್ ತನ್ನ ತ್ರೈಮಾಸಿಕದ ವರದಿಯಲ್ಲಿ (YoY) 6212 ಕೋಟಿ ಲಾಭ ಮಾಡಿದೆ ಎಂದು ತಿಳಿಸಿದೆ. ಆದರೂ ಸಹಾ ಐಟಿ ವಲಯವಾರು ಷೇರುಗಳು ಹೆಚ್ಚು ಮಾರಾಟಕ್ಕೆ ಒಳಗಾದವು.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ -17.35 (-0.09%) ಅಂಕ ಇಳಿಕೆ ಕಂಡು 19,794.00 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -64.66 (-0.09%) ಅಂಕ ಇಳಿಕೆ ಕಂಡು 66,408.39 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಫ್ಟಿಯಲ್ಲಿ BPCL, MARUTI, COALINDIA,POWERGRID, GRASIMಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ INFY, TECHM, APOLLOHOSP,TCS, HCLTECH ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.24ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-1,862.57 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.1,532.08 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.