SUDDIKSHANA KANNADA NEWS/ DAVANAGERE/ DATE:11-10-2023
ಗಿರೀಶ್ ಕೆ ಎಂ
ಜಾಗತಿಕ ಮಾರಕಟ್ಟೆಯಲ್ಲಿನ ಆಶಾದಾಯಕ ವಹಿವಾಟು ಮತ್ತು ದೇಶಿ ಹೂಡಿಕೆದಾರರ ಖರೀದಿಯು ಭಾರತೀಯ ಷೇರುಪೇಟೆ (Stock market)ಯಲ್ಲಿ ಜಿಗಿತ ಕಂಡುಬಂದಿದೆ.
Read Also This Story:
Davanagere: ಒಂದಿಬ್ಬರು ಮಾತ್ರ ನಾಯಕರಲ್ಲ, ಕಾಂಗ್ರೆಸ್ ನಲ್ಲಿ ಹೆಚ್ಚಿನವರು ನಾಯಕರೇ: ಸಿಎಂ ಸಿದ್ದರಾಮಯ್ಯರ ಸೂಚನೆಗೆ ಮೇರೆಗೆ ಓಡಾಟ ಎಂಬ ವಿನಯ್ ಕುಮಾರ್ ರಣತಂತ್ರವೇನು…?
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 121.50 (0.62%) ಅಂಕ ಏರಿಕೆ ಕಂಡು 19,811.35 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 393.69 (0.59%) ಅಂಕ ಏರಿಕೆ ಕಂಡು 66,473.05 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಫ್ಟಿಯಲ್ಲಿ Hero MotoCorp, Wipro,Grasim Inds, UltraTech Cem,Dr. Reddys ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ HCL Tech, Adani Ports SEZ,SBI, TCS, Coal India Ltd ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.20ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-421.77 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.1,032.02 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.