Site icon Kannada News-suddikshana

STOCK MARKET:ಷೇರುಪೇಟೆಯಲ್ಲಿ ಮುಂದುವರೆದ ಏರಿಕೆ: ನಿಫ್ಟಿ 107 ಅಂಕ, ಸೆನ್ಸೆಕ್ಸ್ 364 ಅಂಕ ಏರಿಕೆ

STOCK MARKET

STOCK MARKET

SUDDIKSHANA KANNADA NEWS/ DAVANAGERE/ DATE:06-10-2023

ಭಾರತೀಯ ಷೇರುಪೇಟೆ (Stock market)ಯಲ್ಲಿ ಖರೀದಿ ಜೋರಾಗಿದ್ದು ಇಂದು ಸಹ ಏರಿಕೆ ಕಂಡಿದೆ. ಮಾರುಕಟ್ಟೆ ಆರಂಭದಿಂದಲೂ ಏರುಗತಿಯಲ್ಲಿತ್ತು. ಇಂದು ನಡೆದ RBI ಹಣಕಾಸು ನೀತಿ ಸಭೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

Read Also This Story:

Davanagere: ದಾವಣಗೆರೆಯಲ್ಲಿ ಡಿಸೆಂಬರ್ 23, 24ಕ್ಕೆ ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಅಧಿವೇಶನ: ಎರಡು ದಿನಗಳ ಕಾಲ ಆಯೋಜಿಸಲು ನಿರ್ಧರಿಸಿದ್ಯಾಕೆ…?

ವಿತ್ತೀಯ ನೀತಿ ಸಮಿತಿಯು ಸರ್ವಾನುಮತದಿಂದ ಮತ ಚಲಾಯಿಸಿ ರೆಪೊ ದರವನ್ನು ಶೇ 6.50 ರಷ್ಟು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಪರಿಣಾಮವಾಗಿ, ಸ್ಥಾಯಿ ಠೇವಣಿ ಸೌಲಭ್ಯ (ಎಸ್‌ಡಿಎಫ್) ದರವು 6.25 ಶೇಕಡಾ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್‌ಎಫ್) ದರ ಮತ್ತು ಬ್ಯಾಂಕ್ ದರವು ಶೇಕಡಾ 6.75 ರಷ್ಟಿದೆ” ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 107.75 (0.55%) ಅಂಕ ಏರಿಕೆ ಕಂಡು 19,653.50 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 364.06 (0.55%) ಅಂಕ ಏರಿಕೆ ಕಂಡು 65,995.63 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.

ಏರಿಕೆ ಕಂಡ ಷೇರುಗಳು:

ಇಂದು ನಿಫ್ಟಿಯಲ್ಲಿ BAJAJFINSV, BAJFINANCE, TITAN, INDUSINDBK, TATACONSUM ಷೇರುಗಳು ಜಿಗಿತ ಕಂಡವು.

ಇಳಿಕೆ ಕಂಡ ಷೇರುಗಳು:

ನಿಫ್ಟಿಯಲ್ಲಿ HINDUNILVR, COALINDIA, ONGC, ASIANPAINT, BHARTIARTL ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.

ಕರೆನ್ಸಿ ವಹಿವಾಟು:

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.23 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.

FII ಮತ್ತು DII ನಗದು ವಹಿವಾಟು ವಿವರ:

ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ. -90.29 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.783.25 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.

ಗಿರೀಶ್ ಕೆ ಎಂ

Exit mobile version