Site icon Kannada News-suddikshana

ಷೇರು ಮಾರುಕಟ್ಟೆ(STOCK MARKET)ಯಲ್ಲಿ ನಿಫ್ಟಿ ಮತ್ತೊಮ್ಮೆ ಹೊಸ ಎತ್ತರಕ್ಕೆ ಜಿಗಿತ, ಸೆನ್ಸೆಕ್ಸ್ 52 ಅಂಕ ಏರಿಕೆ

STOCK MARKET DAILY UPDATES

STOCK MARKET DAILY UPDATES

SUDDIKSHANA KANNADA NEWS/ DAVANAGERE/ DATE:14-09-2023

– ಗಿರೀಶ್ ಕೆ ಎಂ

 

ಷೇರು ಮಾರುಕಟ್ಟೆ (Stock market)ಯಲ್ಲಿಇಂದು ನಿಫ್ಟಿ ಮತ್ತೊಮ್ಮೆ ಸಾರ್ವಕಾಲಿಕ ಎತ್ತರ ದಾಖಲಿಸಿತು. ಏರುಗತಿಯಲ್ಲಿ ವಹಿವಾಟು ಆರಂಭಿಸಿದ ನಿಫ್ಟಿ ದಾಖಲೆಯ ಗರಿಷ್ಠ ಮಟ್ಟ 20,167.65 ಕ್ಕೆ ತಲುಪಿತು. ನಂತರ ಮಾರಾಟದ ಒತ್ತಡಕ್ಕೆ ಒಳಗಾಗಿ ಇಳಿಕೆಯತ್ತ ಸಾಗಿತ್ತು.

ಈ ಸುದ್ದಿಯನ್ನೂ ಓದಿ: 

Investment: ದೀರ್ಘಕಾಲಿನ ಹೂಡಿಕೆದಾರರಿಗೆ ಖುಷಿ ಸುದ್ದಿ: ಉತ್ತಮ ಆದಾಯ ಗಳಿಸಲು ಇದೆ ಸಾಧ್ಯತೆ…!

ವಲಯವಾರು ವಿಭಾಗದಲ್ಲಿ ಎಫ್‌ಎಂಸಿಜಿ ಸೂಚ್ಯಂಕವು ಇಳಿಕೆ ದಾಖಲಿಸಿದರೆ , ತೈಲ ಮತ್ತು ಅನಿಲ, ರಿಯಾಲ್ಟಿ, ಲೋಹ ಮತ್ತು ಪಿಎಸ್‌ಯು ಬ್ಯಾಂಕ್ ತಲಾ 1 ಪ್ರತಿಶತದಷ್ಟು ಏರಿಕೆ ದಾಖಲಿಸಿತು.

ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 33.10 (0.16%) ಅಂಕ ಏರಿಕೆ ಕಂಡು 20,103.10 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 52.01(0.07%) ಅಂಕ ಏರಿಕೆ ಕಂಡು 67,519 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.

ಏರಿಕೆ ಕಂಡ ಷೇರುಗಳು:

ಇಂದು UPL, HINDALCO, M&M, ONGC, DIVISLAB ಷೇರುಗಳು ಜಿಗಿತ ಕಂಡವು.

 

ಇಳಿಕೆ ಕಂಡ ಷೇರುಗಳು:

ASIANPAINT, HDFCLIFE, COALINDIA, BRITANNIA, LTIM ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.

 

ಕರೆನ್ಸಿ ವಹಿವಾಟು:

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.03 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.

FII ಮತ್ತು DII ನಗದು ವಹಿವಾಟು ವಿವರ:

ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ +294.69 ಕೋಟಿ ನಿವ್ವಳ ಖರೀದಿ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ. -50.80 ಕೋಟಿ ನಿವ್ವಳ ಮಾರಾಟ ಮಾಡಿದ್ದಾರೆ.

 

 

Exit mobile version