Site icon Kannada News-suddikshana

STOCK MARKET: ಮತ್ತೆ ಕುಸಿತ ಕಂಡ ಷೇರುಪೇಟೆ : ನಿಫ್ಟಿ 46 ಅಂಕ, ಸೆನ್ಸೆಕ್ಸ್ 247 ಅಂಕ ಇಳಿಕೆ

SUDDIKSHANA KANNADA NEWS/ DAVANAGERE/ DATE:19-10-2023

ಗಿರೀಶ್ ಕೆ. ಎಂ.

ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ,ಹಲವು ಕಂಪನಿಗಳ ತ್ರೈಮಾಸಿಕ ವರದಿ ಆಶಾದಾಯಕ ವಾಗಿಲ್ಲದ ಕಾರಣಗಳಿಂದಾಗಿ ಭಾರತೀಯ ಷೇರುಪೇಟೆ ಕುಸಿತ ಕಂಡಿದೆ.

Read Also This Story:

Davanagere: ಬೆಣ್ಣೆನಗರಿಯಲ್ಲಿ ಅಂತಾರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿ ಕಲರವ: ಅ. 22ಕ್ಕೆ ಚಾಲನೆ 29ಕ್ಕೆ ಮುಕ್ತಾಯ, ವಿಜೇತರಾದವರಿಗೆ ಸಿಗುವ ನಗದು ಬಹುಮಾನ ಎಷ್ಟು ಗೊತ್ತಾ…?

ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ (Stock market) ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ -46.40 (-0.24%) ಅಂಕ ಇಳಿಕೆ ಕಂಡು 19,624.70 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -247.78 (-0.37%) ಅಂಕ ಇಳಿಕೆ ಕಂಡು 65,629.24 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.

ಏರಿಕೆ ಕಂಡ ಷೇರುಗಳು:

ಇಂದು ನಿಫ್ಟಿಯಲ್ಲಿ BAJAJ-AUTO,LTIM, HEROMOTOCO, NESTLEIND, ULTRACEMCO ಷೇರುಗಳು ಜಿಗಿತ ಕಂಡವು.

ಇಳಿಕೆ ಕಂಡ ಷೇರುಗಳು:

ನಿಫ್ಟಿಯಲ್ಲಿ WIPRO, TECHM, SUNPHARMA, NTPC, UPL ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.

ಕರೆನ್ಸಿ ವಹಿವಾಟು:

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.23 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.

FII ಮತ್ತು DII ನಗದು ವಹಿವಾಟು ವಿವರ:

ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-1,093.47 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.736.15 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.

 

Exit mobile version