SUDDIKSHANA KANNADA NEWS/ DAVANAGERE/ DATE: 07-09-2023
– ಗಿರೀಶ್ ಕೆ ಎಂ
ಮುಂಬೈ ಷೇರು ಮಾರುಕಟ್ಟೆ(Stock market)ಯಲ್ಲಿ ಗೂಳಿಯ ಓಟ ಜೋರಾಗಿದ್ದು, ಸತತ ಐದು ದಿನದ ವಹಿವಾಟು ಧನಾತ್ಮಕವಾಗಿ ಮುಕ್ತಾಯಗೊಂಡಂತಾಗಿದೆ. ಮಾರುಕಟ್ಟೆ ಆರಂಭಗೊಂಡಾಗ ಅತ್ಯಲ್ಪ ಮಟ್ಟದ ಇಳಿಕೆ ಕಂಡಿತು.ತದನಂತರ ಚೇತರಿಕೆ ಕಂಡ ಸೂಚ್ಯಂಕಗಳು ಏರಿಕೆಯ ಹಾದಿಯತ್ತ ಸಾಗಿತ್ತು. ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 116.00 (0.59%) ಅಂಕ ಏರಿಕೆ ಕಂಡು 19,727.05 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 385.04 (0.58%) ಅಂಕ ಏರಿಕೆ ಕಂಡು 66,265.56 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಈ ಸುದ್ದಿಯನ್ನೂ ಓದಿ:
Ramya Tweet: ಶೀಘ್ರದಲ್ಲೇ ನಮ್ಮ ಊರಿನಲ್ಲಿ ಭೇಟಿಯಾಗೋಣ! ಮೋಹಕ ತಾರೆ ರಮ್ಯಾ @ ದಿವ್ಯಾಸ್ಪಂದನ ಈ ಟ್ವೀಟ್ ಮಾಡಿದ್ಯಾಕೆ…?
ಇಂದು ನಿಫ್ಟಿಯಲ್ಲಿ ರಿಯಾಲಿಟಿ, ಫೈನಾನ್ಸ್, ಬ್ಯಾಂಕ್ , ಮಾಧ್ಯಮ ವಲಯದ ಷೇರುಗಳು ಅಧಿಕ ಪ್ರಮಾಣದಲ್ಲಿ ಏರಿಕೆ ಕಂಡವು. ಎಫ್ಎಂಸಿಜಿ , ಫಾರ್ಮ, ಹೆಲ್ತ್ ಕೇರ್, ಮೆಟಲ್ ವಲಯದ ಷೇರುಗಳು ಇಳಿಕೆ ಯೊಂದಿಗೆ ಕೊನೆಗೊಂಡವು.
ಏರಿಕೆ ಕಂಡ ಷೇರುಗಳು:
ಇಂದು ಕೋಲ್ ಇಂಡಿಯಾ, ಎಲ್ & ಟಿ, ಇಂಡಸ್‌ಇಂಡ್ ಬ್ಯಾಂಕ್, ಎಸ್‌ಬಿಐ ಲೈಫ್ ಇನ್ಶುರೆನ್ಸ್ ಮತ್ತು ಟೆಕ್ ಮಹೀಂದ್ರಾ ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ಟಾಟಾ ಕನ್ಸೂಮರ್, ಒ ಎನ್ ಜಿ ಸಿ , ಎಂ & ಎಂ, ಬ್ರಿಟಾನಿಯಾ ಇಂಡಸ್ಟ್ರೀಸ್, ಸನ್ ಫಾರ್ಮಾ ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು:
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ₹ 83.21 ರಲ್ಲಿ ದಿನದ ವಹಿವಾಟು ನಡೆಸುತ್ತಿದೆ.
FII ಮತ್ತು DII ನಗದು ವಹಿವಾಟು ವಿವರ:
ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ -758.55 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ. 28.11 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.