Site icon Kannada News-suddikshana

STOCK MARKET: ಹೂಡಿಕೆದಾರರು ಫುಲ್ ಖುಷ್!!! ಮತ್ತೆ ಹೊಸ ಎತ್ತರಕ್ಕೆ ಜಿಗಿದ ಷೇರುಪೇಟೆ: 21800 ರ ಗಡಿ ಮುಟ್ಟಿದ ನಿಫ್ಟಿ

SUDDIKSHANA KANNADA NEWS/ DAVANAGERE/ DATE:28-12-2023

ಭಾರತೀಯ ಷೇರುಪೇಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಸೂಚ್ಯಂಕಗಳು ಪ್ರತೀ ದಿನ ಹೊಸ ಸಾರ್ವಕಾಲಿಕ ಎತ್ತರಕ್ಕೆ ಜಿಗಿಯುತ್ತಿದೆ. ಇದರಿಂದಾಗಿ ಹೂಡಿಕೆದಾರರು ಫುಲ್ ಖುಷ್!!!!

ಹೌದು, ಹೂಡಿಕೆದಾರರ ಸಂಪತ್ತು ದಿನದಿಂದ ದಿನಕ್ಕೆ ವೃದ್ದಿಗೊಳ್ಳುತ್ತಿದೆ. ಇಂದು ಸಹಾ ನಿಫ್ಟಿ , ಸೆನ್ಸೆಕ್ಸ್ , ಬ್ಯಾಂಕ್ ನಿಫ್ಟಿ ಸೂಚ್ಯಂಕಗಳು ಸಾರ್ವಕಾಲಿಕ ಏರಿಕೆ ದಾಖಲಿಸಿವೆ. ಜಾಗತಿಕವಾಗಿ ಭಾರತದ ಆರ್ಥಿಕತೆ ಸದೃಢ ಗೊಳ್ಳುತ್ತಿರುವುದು ಮತ್ತು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಹುದೆಂಬ ಆಶಾಭಾವನೆಯ ಕಾರಣದಿಂದ ಭಾರತೀಯ ಮಾರುಕಟ್ಟೆ ಹೊಸ ಎತ್ತರಕ್ಕೆ ಜಿಗಿದಿದೆ.

ವಹಿವಾಟಿನ ನಡುವೆ ನಿಫ್ಟಿ ಸೂಚ್ಯಂಕ ಸಾರ್ವಕಾಲಿಕ ಎತ್ತರ 21,801.45 ತಲುಪಿದರೆ, ಸೆನ್ಸೆಕ್ಸ್ 72,484.34 ತಲುಪಿತ್ತು. ಬ್ಯಾಂಕ್ ನಿಫ್ಟಿ ಸೂಚ್ಯಂಕ ಸಾರ್ವಕಾಲಿಕ ಎತ್ತರ 48,636.45 ತಲುಪಿತ್ತು. ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 123.96 (0.57%) ಅಂಕ ಏರಿಕೆ ಕಂಡು 21,778.70 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 371.95 (0.51%) ಏರಿಕೆ ಕಂಡು 72,410.38 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.

ಏರಿಕೆ ಕಂಡ ಷೇರುಗಳು:

ನಿಫ್ಟಿಯಲ್ಲಿ COALINDIA, NTPC, M&M, HEROMOTOCO, BPCL ಷೇರುಗಳು ಜಿಗಿತ ಕಂಡವು.

ಇಳಿಕೆ ಕಂಡ ಷೇರುಗಳು:

ನಿಫ್ಟಿಯಲ್ಲಿ ADANIENT, LT, EICHERMOT, LTIM, ADANIPORTS ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.

ಕರೆನ್ಸಿ ವಹಿವಾಟು:

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.16 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.

FII ಮತ್ತು DII ನಗದು ವಹಿವಾಟು ವಿವರ:

ಮಾರುಕಟ್ಟೆ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.4,358.99 ಕೋಟಿ ನಿವ್ವಳ ಖರೀದಿ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.136.64 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.

ಗಿರೀಶ್ ಕೆ ಎಂ

Exit mobile version