Site icon Kannada News-suddikshana

STOCK MARKET: ನೀರಸವಾಗಿ ಮುಕ್ತಾಯಗೊಂಡ ಷೇರುಪೇಟೆ

SUDDIKSHANA KANNADA NEWS/ DAVANAGERE/ DATE:07-02-2024

ಭಾರತೀಯ ಷೇರುಪೇಟೆಯಲ್ಲಿ ನೀರಸ ವಹಿವಾಟು ಕಂಡುಬಂದಿದ್ದು, ಇಂದು ಸೂಚ್ಯಂಕಗಳು ನೀರಸವಾಗಿ ಅಂತ್ಯ ಕಂಡಿವೆ.

ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 1.10 (0.01%) ಅಂಕ ಏರಿಕೆ ಕಂಡು 21,930.50 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ -34.09 (-0.04%) ಅಂಕ ಇಳಿಕೆ ಕಂಡು 72,152.00 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.

ಏರಿಕೆ ಕಂಡ ಷೇರುಗಳು

ನಿಫ್ಟಿಯಲ್ಲಿ SBIN, GRASIM, HDFCLIFE, JSWSTEEL, AXISBANK ಷೇರುಗಳು ಜಿಗಿತ ಕಂಡವು.

ಇಳಿಕೆ ಕಂಡ ಷೇರುಗಳು

ನಿಫ್ಟಿಯಲ್ಲಿ TECHM, POWERGRID, INFY, ADANIPORTS, TCS ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.

FII ಮತ್ತು DII ನಗದು ವಹಿವಾಟು ವಿವರ

ಮಾರುಕಟ್ಟೆ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-1,691.02 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.327.73 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.

ಕರೆನ್ಸಿ ವಹಿವಾಟು

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 82.97 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.

ಗಿರೀಶ್ ಕೆ ಎಂ

Exit mobile version