SUDDIKSHANA KANNADA NEWS/ DAVANAGERE/ DATE:13-11-2023
ಭಾರತೀಯ ಷೇರುಪೇಟೆಯಲ್ಲಿ ದೀಪಾವಳಿಯ ಪ್ರಯುಕ್ತ ವಿಶೇಷ ವಹಿವಾಟು ನಡೆಯಿತು. ಷೇರುಪೇಟೆಯಲ್ಲಿ ದೀಪಾವಳಿ ಹಬ್ಬದಂದು ಒಂದು ಗಂಟೆಯವರೆಗೆ ವಿಶೇಷವಾದ ವಹಿವಾಟನ್ನು ನಡೆಸಲಾಗುತ್ತದೆ. ಇದನ್ನು ಮುಹೂರ್ತ ಟ್ರೇಡಿಂಗ್ ಎಂದು ಕರೆಯಲಾಗುತ್ತದೆ.
ಇಂದಿನ ವಹಿವಾಟಿನಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಹೂಡಿಕೆದಾರರು ದೀಪಾವಳಿಯ ಶುಭ ಸಂದರ್ಭದಲ್ಲಿ ಷೇರುಗಳ ಖರೀದಿಯಲ್ಲಿ ತೊಡಗಿರುವುದು ಹೆಚ್ಚು ಕಂಡು ಬಂದಿತು. ಇದರಿಂದಾಗಿ ಸೂಚ್ಯಂಕಗಳು ಏರಿಕೆ ದಾಖಲಿಸಿವೆ.
ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 100.21 (0.52%) ಅಂಕ ಏರಿಕೆ ಕಂಡು 19,525.55 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 354.77 (0.54%) ಅಂಕ ಏರಿಕೆ ಕಂಡು 65,259.45 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಏರಿಕೆ ಕಂಡ ಷೇರುಗಳು:
ಇಂದು ನಿಫ್ಟಿಯಲ್ಲಿ COALINDIA, UPL, INFY, EICHERMOT, WIPRO, BAJAJFINSV, LTIM ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ನಿಫ್ಟಿಯಲ್ಲಿ BRITANNIA,SUNPHARMA, APOLLOHOSP, ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.