SUDDIKSHANA KANNADA NEWS/ DAVANAGERE/ DATE: 06-09-2023
– ಗಿರೀಶ್ ಕೆ. ಎಂ.
ಮುಂಬೈ ಷೇರುಪೇಟೆ (Stock market)ಯಲ್ಲಿ ಇಂದು ಏರಿಳಿತ ಜೋರಾಗಿತ್ತು. ಷೇರು ಮಾರುಕಟ್ಟೆ (Stock market) ಆರಂಭಗೊಂಡಾಗ ಅತ್ಯಲ್ಪ ಮಟ್ಟದ ಏರಿಕೆ ಕಂಡಿತು. ತದನಂತರ ಮಾರಾಟದ ಒತ್ತಡಕ್ಕೆ ಒಳಗಾಗಿ ತೀವ್ರ ಕುಸಿತಕ್ಕೆ ಒಳಗಾಗಿತ್ತು. ದಿನದ ಮಧ್ಯದಲ್ಲಿ ಸುಮಾರು 90 ಅಂಕಗಳಷ್ಟು ನಿಫ್ಟಿ ಇಳಿಕೆ ಕಂಡು ತದನಂತರ ಚೇತರಿಸಿ ಕೊಂಡಿತು. ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 36.15 (0.18%) ಅಂಕ ಏರಿಕೆ ಕಂಡು 19,611.05 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 100.26 (0.15%) ಅಂಕ ಏರಿಕೆ ಕಂಡು 65,880.52 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.
ಟಾಟಾ ಕನ್ಸೂಮರ್ ಅತೀ ಹೆಚ್ಚು ಏರಿಕೆ (4.11%) ಕಂಡಿದ್ದು, ಡಿವೀಸ್ ಲ್ಯಾಬ್ (1.77%),ಭಾರ್ತಿ ಏರ್ಟೆಲ್ (1.62%),ಹೆಚ್ ಡಿ ಎಫ್ ಸಿ ಬ್ಯಾಂಕ್ (1.53%), ಬ್ರಿಟಾನಿಯ (1.44%) ಷೇರುಗಳು ಏರಿಕೆ ಕಂಡು ನಿಫ್ಟಿ 19600 ರ ಗಡಿ ದಾಟಲು ಕಾರಣವಾಯಿತು.
ಈ ಸುದ್ದಿಯನ್ನೂ ಓದಿ:
Mayakonda: ಕೊಳೆತು ಹೋದ ತರಕಾರಿ, ಹುಳ ಹಿಡಿದಿರುವ ಟೊಮೊಟೊ, ನವಿಲು ಕೋಸು, ಮುಳಗಾಯಿ, ಗಂಧವೇ ಇಲ್ಲದ ಬೇಳೆ: ಹಾಸ್ಟೆಲ್ ನ ಅವ್ಯವಸ್ಥೆಯ ಕೆಲ ಸ್ಯಾಂಪಲ್ ಅಷ್ಟೇ…!
ಇಂದು ನಿಫ್ಟಿಯಲ್ಲಿ ಎಫ್ ಎಂ ಸಿ ಜಿ, ಫಾರ್ಮಾ, ಹೆಲ್ತ್ ಕೇರ್, ಆಯಿಲ್ & ಗ್ಯಾಸ್ ಮತ್ತು ಕನ್ಸೂಮರ್ ವಲಯದ ಷೇರುಗಳು ಅಧಿಕ ಪ್ರಮಾಣದಲ್ಲಿ ಏರಿಕೆ ಕಂಡವು. ಮೆಟಲ್, ಪಿಎಸ್‌ಯು ಬ್ಯಾಂಕ್ ಮತ್ತು ಐಟಿ ವಲಯದ ಷೇರುಗಳು ಇಳಿಕೆಯೊಂದಿಗೆ ಕೊನೆಗೊಂಡವು.
ಏರಿಕೆ ಕಂಡ ಷೇರುಗಳು:
ಇಂದು ಡಿವಿಸ್ ಲ್ಯಾಬ್, ಭಾರ್ತಿ ಏರ್‌ಟೆಲ್ ಮತ್ತು ಸಿಪ್ಲಾ ಷೇರುಗಳು ಜಿಗಿತ ಕಂಡವು.
ಇಳಿಕೆ ಕಂಡ ಷೇರುಗಳು:
ಆಕ್ಸಿಸ್ ಬ್ಯಾಂಕ್, ಹಿಂಡಾಲ್ಕೊ ಮತ್ತು ಟಾಟಾ ಸ್ಟೀಲ್ ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.
ಕರೆನ್ಸಿ ವಹಿವಾಟು
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ₹ 83.14 ರಲ್ಲಿ ದಿನದ ವಹಿವಾಟು ನಡೆಸುತ್ತಿದೆ.