Site icon Kannada News-suddikshana

ಅಡಿಕೆ ಮಾರಕ ರೋಗ ತಡೆ, ಪರಿಹಾರಕ್ಕೆ ಕ್ರಮ ಕೈಗೊಳ್ಳಿ: ರಾಜ್ಯದ ಸಂಸದರ ನಿಯೋಗ ಒತ್ತಾಯ

ಅಡಿಕೆ

SUDDIKSHANA KANNADA NEWS/ DAVANAGERE/DATE:22_08_2025

ನವದೆಹಲಿ/ ದಾವಣಗೆರೆ: ಅಡಿಕೆ ಮಾರಕ ರೋಗಗಳ ತಡೆ ಮತ್ತು ಪರಿಹಾರದ ವಿಷಯವಾಗಿ ರಾಜ್ಯದ ಅಡಿಕೆ ಬೆಳೆಯುವ ಪ್ರದೇಶದ ಲೋಕಸಭಾ ಸದಸ್ಯರು ಮತ್ತು ಬೆಳೆಗಾರರ ಸಂಘಗಳ ಪ್ರತಿನಿಧಿಗಳ ನಿಯೋಗದಿಂದ ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

READ ALSO THIS STORY: ರಸ್ತೆ ರಿಪೇರಿಗೆ ದಾವಣಗೆರೆಯ ಆಲೂರಿನಲ್ಲಿ ವಿದ್ಯಾರ್ಥಿನಿ ಏಕಾಂಗಿ ಧರಣಿ: ಇದು ಕಾಂಗ್ರೆಸ್ ಆಡಳಿತಕ್ಕೆ ಹಿಡಿದ ಕೈಗನ್ನಡಿ!

ಅಡಿಕೆಗೆ ಕೊಳೆ ರೋಗ ಸೇರಿದಂತೆ ಇತರೆ ರೋಗಗಳು ಬಾಧಿಸುತ್ತಿದ್ದು, ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕು. ಅಡಿಕೆ ಬೆಳೆ ಸಂರಕ್ಷಣೆ, ಬೇರೆ ಬೇರೆ ಉತ್ಪನ್ನಗಳ ತಯಾರಿಕೆಗೆ ಉತ್ತೇಚನ ನೀಡಬೇಕು ಎಂದು ನಿಯೋಗವು ನಿರ್ಮಲಾ ಸೀತರಾಮನ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ನಿಯೋಗದಲ್ಲಿ ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ಅವರೊಂದಿಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ವಿ. ಸೋಮಣ್ಣ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಯದುವೀರ ಒಡೆಯರ್, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ್ ಪೂಜಾರಿ, ಬಿ.ವೈ.ರಾಘವೇಂದ್ರ, ಬ್ರಿಜೇಶ್ ಚೌಟ, ಅಡಿಕೆ ” ಮಹಾಮಂಡಳದ ಅಧ್ಯಕ್ಷ ಅರಗ ಜ್ಞಾನೇಂದ್ರ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡಗಿ ಇದ್ದರು.

Exit mobile version