SUDDIKSHANA KANNADA NEWS/ DAVANAGERE/ DATE:16-09-2023
ದಾವಣಗೆರೆ (Davanagere): ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ 56 ನೇ ಜನುಮದಿನದ ಪ್ರಯುಕ್ತ ಸೆ. 21 ಹಾಗೂ 22ರಂದು ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ದಾವಣಗೆರೆ (Davanagere) ಬಾಸ್ಕೆಟ್ ಬಾಲ್ ಕ್ಲಬ್ ನ ಉಪಾಧ್ಯಕ್ಷ ಗಡಿಗುಡಾಳ್ ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎಸ್. ಮಲ್ಲಿಕಾರ್ಜುನ್ ರವರ ಹುಟ್ಟು ಹಬ್ಬದ ಪ್ರಯುಕ್ತ ಬಾಸ್ಕೆಟ್ ಬಾಲ್ ಸೇರಿದಂತೆ ಇತರೆ ಜನೋಪಯೋಗಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:
ಭದ್ರಾ ಜಲಾಶಯ(Bhadra Dam)ದಿಂದ ಭದ್ರಾ ಬಲದಂಡೆ ನಾಲೆ ನೀರು ಬಂದ್: ಅಂತೂ ಇಂತೂ ಆನ್ ಅಂಡ್ ಆಫ್ ಜಾರಿ, ದಾವಣಗೆರೆ ಜಿಲ್ಲೆಯ ರೈತರ ಆಕ್ರೋಶ
ಸೆ. 21ರ ಸಂಜೆ 7 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಹಾಗೂ ದಾವಣಗೆರೆ (Davanagere) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಈ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂದ ಪುರುಷರ ವಿಭಾಗದ 8 ತಂಡಗಳು ಭಾಗವಹಿಸಲಿವೆ ಎಂದರು.
ಧಾರವಾಡ 2, ಚಿಕ್ಕಮಗಳೂರು 2, ಕಾರವಾರ 2, ದಾವಣಗೆರೆ(Davanagere)ಯ 2 ತಂಡಗಳು ಭಾಗವಹಿಸಲಿದ್ದು. 18 ವಯೋಮಿತಿಯ ಬಾಲಕರ ವಿಭಾಗದಲ್ಲಿ 6 ತಂಡಗಳು ಪಾಲ್ಗೊಳ್ಳಲಿವೆ. ಧಾರವಾಡದಿಂದ- ಸಾಯಿ ಹಾಸ್ಟೆಲ್, ಇನ್ಸ್ ಪೈರ್ ಸ್ಪೋರ್ಟ್ಸ್ ಕ್ಲಬ್ ಹಾಗೂ ದಾವಣಗೆರೆ ಮಲ್ಲ ಸಜ್ಜನ್ ಬಾಸ್ಕೆಟ್ ಬಾಲ್ ಕ್ಲಬ್ ತಂಡಗಳು ಭಾಗವಹಿಸಲಿವೆ. 16 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ 4 ತಂಡಗಳು ಬರಲಿದ್ದು, ಬೆಂಗಳೂರು -ವಿದ್ಯಾನಗರ ಸ್ಪೋರ್ಟ್ಸ್ ಹಾಸ್ಟೆಲ್, ವಿಜಯಪುರದ ಡಿವೈ.ಇ.ಎಸ್, ದಾವಣಗೆರೆ ಮಲ್ಲಸಜ್ಜನ್ ಬಾಸ್ಕೆಟ್ ಬಾಲ್ ಕ್ಲಬ್, ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಭಾಗವಹಿಸಲಿವೆ. ಈ ಪಂದ್ಯಾವಳಿಯಲ್ಲಿ ಸುಮಾರು 250-300 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಈ ಎಲ್ಲಾ ಕ್ರೀಡಾಪಟುಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಗೆದ್ದ ತಂಡಗಳಿಗೆ ನಗದು ಬಹುಮಾನವನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸೆ. 22 ರಂದು ಸಂಜೆ 7 ಗಂಟೆಗೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಸಂಜೆ 7 ಗಂಟೆಗೆ ಪಂದ್ಯಾವಳಿಯಲ್ಲಿ ಜಯಗಳಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆಯನ್ನು ಮಾಡಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಿ. ರಾಮಮೂರ್ತಿ, ಕಿರಣ್ ಕುಮಾರ್, ಆರ್. ವೀರೇಶ್, ಎಸ್. ಎಲ್. ಪ್ರಸನ್ನ, ಆರ್. ದರ್ಶನ್, ಸಚಿನ್ ರಾವ್ ಘಾಟ್ಗೆ ಮತ್ತಿತರರು ಹಾಜರಿದ್ದರು.