Site icon Kannada News-suddikshana

SSLC ಫೇಲಾದ್ರೂ ಕ್ಲಾಸ್ ಗೆ ಹೋಗಬಹುದು: ಸರ್ಕಾರ ಆದೇಶ

(Sslc Fails) ಎಸ್.ಎಸ್.ಎಲ್.ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ 10ನೇ ತರಗತಿಗೆ ಪುನರಾರ್ವತಿಸುವ ಕುರಿತು ಸರ್ಕಾರದಿಂದ ಆದೇಶ ಹೊರಡಿಲಾಗಿದೆ.

ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ 10ನೇ ತರಗತಿಗೆ ಪುನರಾರ್ವತಿಸುವ ಕುರಿತು ಉಲ್ಲೇಖ (1) ರಂತೆ ಸರ್ಕಾರದಿಂದ ಆದೇಶ ಹೊರಡಿಲಾಗಿದ್ದು, ಸದರಿ ಸರ್ಕಾರದ ಆದೇಶದಂತೆ ಕ್ರಮವಹಿಸಲು ಉಲ್ಲೇಖ (2) ರ ಈ ಕಛೇರಿಯ ಜ್ಞಾಪನ 03-08-2024ರಲ್ಲಿ ತಿಳಿಸಲಾಗಿತ್ತು. ಶಾಲೆಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆ ಕುರಿತು ಮಾಹಿತಿ ನೀಡಲು ಸಹ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರವರಿಗೆ ತಿಳಿಸಲಾಗಿದೆ.

ಇದರ ಕುರಿತಾಗಿ ಪ್ರಗತಿ ಪರಿಶೀಲಿಸಲು 30.09.2024 ರಂದು ಅಪರಾಹ್ನ 3.00 ಗಂಟೆಗೆ ವಿಡಿಯೋ ಕಾನ್ಸರೆನ್ಸ್ ಸಭೆ ಏರ್ಪಡಿಸಲಾಗಿದ್ದು, ಸಭೆಗೆ ಅಗತ್ಯ ಮಾಹಿತಿಗಳೊಂದಿಗೆ Zoom link ಮೂಲಕ ಹಾಜರಾಗಲು ಕೋರಿದೆ. ಸರ್ಕಾರದ ಆದೇಶದಂತೆ ಅನುತ್ತೀರ್ಣ ವಿದ್ಯಾರ್ಥಿಗಳು ಮರುದಾಖಲಾತಿಯಾಗಿರುವ ವರದಿಯನ್ನು ಉಲ್ಲೇಖ:02 ರ ಜ್ಞಾಪನಗಳಲ್ಲಿ ಸೂಚಿಸಿದಂತೆ ನಿಗಧಿತ ನಮೂನೆಯಲ್ಲಿ 27.09.2024ರ ಒಳಗೆ ಕಛೇರಿಗೆ ಮಾಹಿತಿ ಸಲ್ಲಿಸಲು ಎಲ್ಲಾ ಉಪನಿರ್ದೇಶಕರುಗಳಿಗೆ ತಿಳಿಸಿದೆ.

Exit mobile version