Home ದಾವಣಗೆರೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ನನ್ನ ಹಳೆಯ ಸ್ನೇಹಿತ, ನಗುನಗುತ್ತಲೇ ಎಲೆಕ್ಷನ್ ಮಾಡೋಣ”: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ 
ದಾವಣಗೆರೆಬೆಂಗಳೂರು

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ನನ್ನ ಹಳೆಯ ಸ್ನೇಹಿತ, ನಗುನಗುತ್ತಲೇ ಎಲೆಕ್ಷನ್ ಮಾಡೋಣ”: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ 

Share
ಎಸ್. ಎಸ್. ಮಲ್ಲಿಕಾರ್ಜುನ್
Share

ದಾವಣಗೆರೆ: “ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಶ್ರೀನಿವಾಸ್ ದಾಸಕರಿಯಪ್ಪರು ನನ್ನ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರು ಜನತಾದಳದಲ್ಲಿದ್ದ ಕಾಲದಿಂದಲೂ ನನಗೆ ಪರಿಚಯ, ದಾಸಕರಿಯಪ್ಪ ಒಳ್ಳೆಯವರೇ,” ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಹಳೇ ದಾವಣಗೆರೆಯ ಸಾದಿಕ್ ಪೈಲ್ವಾನ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ವೈಮನಸ್ಸು ಮರೆತು ಸೌಹಾರ್ದತೆಯ ಮಾತುಗಳನ್ನಾಡಿದರು. “ಎಲ್ಲರೂ ಒಳ್ಳೆಯ ಮನೋಭಾವನೆಯಿಂದ ಚುನಾವಣೆ ನಡೆಸೋಣ. ನಗು ನಗುತ್ತಲೇ ಎಲೆಕ್ಷನ್ ಮಾಡೋಣ. ರಾಜಕೀಯದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ನೇಹ ಮನೋಭಾವದಿಂದ ಚುನಾವಣೆ ಎದುರಿಸಬೇಕು,” ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಮಾಜಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಈ ಕ್ಷೇತ್ರಕ್ಕೆ ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಸಚಿವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Share

Leave a comment

Leave a Reply

Your email address will not be published. Required fields are marked *