ದಾವಣಗೆರೆ: 2008ರಲ್ಲಿ ವಿಧಾನಸಭೆ ಚುನಾವಣೆ ವೇಳೆ ಹೆಲಿಕಾಪ್ಟರ್ ನಲ್ಲಿ ಟಿಕೆಟ್ ತಂದಾಗ ಆದಂತೆ ಮತ್ತೆ ಆಗಬಾರದು. ಈಗಲೇ ಘೋಷಣೆ ಮಾಡಿ ಹೋಗಿ. ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ರೀತಿಯಲ್ಲಿ ಮಾಡುವುದು ಬೇಡ. ಈ ವೇಳೆ ನಡೆದ ಘಟನೆಯಲ್ಲಿ ನನ್ನದು ತಪ್ಪಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಮತ್ತು ತೋಟಗಾರಿಕೆ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ಡಾ. ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 9ರಂದು ಉಪ ಚುನಾವಣೆ ನಿಗದಿ ಆದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಕರೆದಿದ್ದ ಜಿಲ್ಲಾ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸೈಯದ್ ಸೈಫುಲ್ಲಾ ಸಾಹೇಬರದ್ದು ತಪ್ಪಿಲ್ಲ. ಆದರೆ ಮಾತನಾಡುವವರಿಗೆ ಆಸ್ಪದ ಕೊಟ್ಟಂತಾಯಿತು. ಸೈಯದ್ ಸೈಫುಲ್ಲಾ ಸಾಹೇಬರು ನನ್ನ ಜೊತೆ ಬಂದರು, ನಾನು ಅವರ ಜೊತೆ ಹೋದೆ. ಕೆಲವರಿಗೆ ಏನು ತಿಳಿಯಿತೋ ಬಿ ಫಾರಂ ತಿದ್ದಿದರು. ನಾನ್ಯಾರೋ ನಾಮಪತ್ರ ಸಲ್ಲಿಸಿದೆ ಎಂದು ಸುದ್ದಿ ಹಬ್ಬಿಸಿದರು. ಸೈಫುಲ್ಲಾ ಸಾಹೇಬರಿಗೆ ನೀವೇ ಆಗ ಏನಾಯ್ತು ಎಂದು ಕೇಳಬೇಕು. ಮನೆಗೆ ಬಂದು ಅವರು ಮಾತನಾಡಿದ್ದರು. ಯಾರ್ಯಾರದ್ದೋ ಹೇಳಿಕೆ ನೋಡಿದೆ. ಇದೆಲ್ಲಾ ಸರಿಯಲ್ಲ ಎಂದು
ಹೇಳಿದರು.
- Assembly Byelection 2026
- Candidate Announcement.
- Congress Candidate Selection
- Davanagere Politics
- Davanagere South Byelection
- Karnataka Congress
- Shamanur Shivashankarappa
- SS Mallikarjun
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕೀಯ ಸುದ್ದಿ
- ಚುನಾವಣಾ ಒಗ್ಗಟ್ಟು.
- ಜಿಲ್ಲಾ ಕಾಂಗ್ರೆಸ್ ಸಮಿತಿ
- ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಬಿಜೆಪಿ ಹಾವಳಿ ಎಚ್ಚರಿಕೆ
- ಶಾಮನೂರು ಶಿವಶಂಕರಪ್ಪ ನಿಧನ
- ಸೈಯದ್ ಸೈಫುಲ್ಲಾ
- ಹೆಲಿಕಾಪ್ಟರ್ ಬಿ-ಫಾರಂ ವಿವಾದ





Leave a comment