Site icon Kannada News-suddikshana

ಕಲ್ಲು ತೂರಾಟ, ಗಲಭೆ ನಡೆದಿಲ್ಲ, ಎರಡು ಕೋಮಿನವರ ವಿರುದ್ಧ ಕೇಸ್: ಎಸ್ಪಿ ಉಮಾ ಪ್ರಶಾಂತ್ ಸ್ಪಷ್ಟನೆ

ಎಸ್ಪಿ ,

SUDDIKSHANA KANNADA NEWS/DAVANAGERE/DATE:25_09_2025

ದಾವಣಗೆರೆ: ಕಾರ್ಲ್ ಮಾರ್ಕ್ಸ್ ನಗರದಲ್ಲಿ ಫ್ಲೆಕ್ಸ್ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಲ್ಲು ತೂರಾಟ ಆಗಿಲ್ಲ. ಗಲಭೆಯೂ ಆಗಿಲ್ಲ ಎಂದು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರು ಸ್ಪಷ್ಟನೆ ನೀಡಿದ್ದಾರೆ.

READ ALSO THIS STORY: ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜು ಹೃದಯಾಘಾತಕ್ಕೆ ಬಲಿ: ಸ್ನೇಹಪರ ಜೀವಿಯ ಯಶೋಗಾಥೆ ಕಂಪ್ಲೀಟ್ ಡೀಟೈಲ್ಸ್

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎರಡು ಕೋಮಿನ ಜನರು ಪರಸ್ಪರ ದೂರು ನೀಡಿದ್ದು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೂರ್ವ ವಲಯ ಐಜಿಪಿ, ಎಸ್ಪಿ ಉಮಾ ಪ್ರಶಾಂತ್ ಅವರು ಭೇಟಿ ನೀಡಿ ಪರಿಶೀಲಿಸಿದ್ದು, ಎರಡು ಕೋಮಿನ ಮುಖಂಡರಿಗೆ ಶಾಂತಿ ಸೌಹಾರ್ದತೆ ಕಾಪಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಯಾವುದೇ ಕಲ್ಲು ತೂರಾಟ ನಡೆದಿಲ್ಲ, ಜನರು ಶಾಂತಿ, ಸಂಯಮದಿಂದ ವರ್ತಿಸಬೇಕು. ವಿನಾಕಾರಣ ಗಲಭೆ ಮತ್ತು ಗೊಂದಲ ಸೃಷ್ಟಿಸಿದರೆ ಸಹಿಸುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ ವಿಡಿಯೋ, ಫೋಟೋ, ಮಾಹಿತಿ ಹಾಕಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಕೋಮುದ್ವೇಷ ಉಂಟು ಮಾಡುವಂಥ ಯಾವುದೇ ಪೋಸ್ಟ್ ಹಾಕಬಾರದು ಎಂದು ಉಮಾ ಪ್ರಶಾಂತ್ ಅವರು ಎಚ್ಚರಿಕೆ ನೀಡಿದ್ದಾರೆ.

Exit mobile version