Site icon Kannada News-suddikshana

NEW YEAR 2025: ಸಿಸಿಟಿವಿ, ತಾಲೂಕು ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಸೇರಿ ಪೊಲೀಸ್ ಇಲಾಖೆಯ ಹದ್ದಿನ ಕಣ್ಣು ಹೇಗಿದೆ ಗೊತ್ತಾ?

SUDDIKSHANA KANNADA NEWS/ DAVANAGERE/ DATE:30-12-2024

ದಾವಣಗೆರೆ: 2025 ಆಗಮನಕ್ಕೆ ಉಳಿದಿರುವುದು ಕೆಲವೇ ಗಂಟೆಗಳು ಮಾತ್ರ. ಈಗಾಗಲೇ ಪೊಲೀಸ್ ಇಲಾಖೆಯು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸಿದೆ. ಮಾತ್ರವಲ್ಲ, ಕಿಡಿಗೇಡಿಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಿದೆ.

ಕೈಗೊಂಡಿರುವ ಕ್ರಮಗಳು:

– ನಗರದ ವಿವಿಧ ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು, ಕುಡಿದು ವಾಹನಗಳನ್ನು ಚಾಲನೆ ಮಾಡುವವರ, ತ್ರಿಬಲ್ ರೈಡಿಂಗ್ ಹಾಗೂ ವ್ಹೀಲಿಂಗ್ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ.

– ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ತಾಲ್ಲೂಕು ಕೇಂದ್ರಗಳಾದ ಹರಿಹರ, ಹೊನ್ನಾಳಿ, ಚನ್ನಗಿರಿ, ಜಗಳೂರು, ನ್ಯಾಮತಿ ಪಟ್ಟಣಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್.

– ದಾವಣಗೆರೆ ಜಿಲ್ಲೆಯಾದ್ಯಂತ ಹೊಸ ವರ್ಷಾಚರಣೆ ಸಂಬಂಧ ಅಗತ್ಯ ಪೊಲೀಸ್ ಅಧಿಕಾರಿ -ಸಿಬ್ಬಂದಿಗಳ ನಿಯೋಜನೆ. ಆಯಾಕಟ್ಟಿನ ಸ್ಥಳಗಳಲ್ಲಿ ಕೆಎಸ್‌ಆರ್‌ಪಿ ಮತ್ತು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

– ಜಿಲ್ಲೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್‌ಗಳು ನಿಗಧಿಪಡಿಸಿದ ಸಮಯಕ್ಕೆ ಬಂದ್ ಮಾಡಲು ಸೂಚನೆ

– ನಗರದ ಹೊರ ವಲಯಗಳಾದ ಕೊಂಡಜ್ಜಿ ಕೆರೆ, ದೇವರಬೆಳಕೆರೆ ಚೆಕ್ ಡ್ಯಾಂ ಮತ್ತು ಇತರೆ ಹೊರ ಭಾಗಗಳಲ್ಲೂ ಪೊಲೀಸ್ ನಿಯೋಜನೆ ಮಾಡಲಾಗಿದೆ.

– ಹೊಸ ವರ್ಷಾಚರಣೆ ಆಚರಣೆ ಕಾರ್ಯಕ್ರಮಗಳ ಆಯೋಜಕರುಗಳಿಗೆ ಈಗಾಲೇ ಯಾವುದೇ ಅವಘಡಗಳಿಗೆ ಅವಕಾಶವಿರದಂತೆ ಸೂಕ್ತ ಪೂರ್ವ ಸಿದ್ದತೆಗಳನ್ನು ಮತ್ತು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆಗಳನ್ನು ನೀಡಲಾಗಿರುತ್ತದೆ.

– ದಾವಣಗೆರೆ ನಗರದಲ್ಲಿ ಅಗತ್ಯವಿದ್ದ ಸೂಕ್ಷ್ಮ ಪ್ರದೇಶ ಕಡೆಗಳಲ್ಲಿ ಡ್ರೋನ್ ನಿಗಾವಹಿಸಲಾಗುವುದು.

– ದಾವಣಗೆರೆ ಜಿಲ್ಲೆಯಾದ್ಯಂತ ಹೊಸ ವರ್ಷಾಚರಣೆ ಸಂಬಂಧ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

Exit mobile version