Home “ಕೋಮುವಾದವು ಸಾಮಾಜಿಕ ಅನ್ಯಾಯದ ರಾಜಕೀಯ ಮಾದರಿ”: ಸಿಎಂ ಸಿದ್ದರಾಮಯ್ಯ ಬೇಸರ
Homeದಾವಣಗೆರೆಬೆಂಗಳೂರು

“ಕೋಮುವಾದವು ಸಾಮಾಜಿಕ ಅನ್ಯಾಯದ ರಾಜಕೀಯ ಮಾದರಿ”: ಸಿಎಂ ಸಿದ್ದರಾಮಯ್ಯ ಬೇಸರ

Share
ಸಿದ್ದರಾಮಯ್ಯ
Share

ಬೆಂಗಳೂರು: “ಕೋಮುವಾದವು ಸಾಮಾಜಿಕ ಅನ್ಯಾಯದ ರಾಜಕೀಯ ಮಾದರಿ” ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನರಿಗೆ ತಲ್ವಾರು-ಕತ್ತಿ-ತ್ರಿಶೂಲ ಹಂಚುವುದು, ದೇವಸ್ಥಾನ, ಮಸೀದಿ, ಚರ್ಚ್ ಗಳ ಮೇಲೆ ದಾಳಿ ಮಾಡುವುದು, ಪ್ರಜೆಗಳ ಊಟದ ತಟ್ಟೆಯಲ್ಲಿ, ಮನೆಯ ಫ್ರಿಜ್ ಗಳಲ್ಲಿ ಆಹಾರ ಏನಿದೆ ಎಂದು ಇಣುಕಿ ನೋಡಿ ಹಲ್ಲೆ
ನಡೆಸುವುದು, ಜಾತಿ-ಧರ್ಮದ ಹೆಸರಲ್ಲಿ ದ್ವೇಷ, ಅಸೂಯೆ, ಹಿಂಸೆಯನ್ನು ಹರಡುವುದು ಸಂವಿಧಾನ ವಿರೋಧಿ, ಕಾನೂನು ವಿರೋಧಿ ಮತ್ತು ಜನವಿರೋಧಿಯಾದುದು ಎಂದಿದ್ದಾರೆ.

ಇದು ‘’ಸಾಮಾಜಿಕ ಅನ್ಯಾಯ’’ದ ರಾಜಕೀಯ ಮಾದರಿ. ವಿಪರ್ಯಾಸದ ಸಂಗತಿಯೆಂದರೆ ಈ ರೀತಿ ದ್ವೇಷ ಹಂಚುವುದರಲ್ಲಿ ನಿರತರಾಗಿರುವ ಮತ್ತು ಜಾತಿ ಧರ್ಮಗಳ ನಡುವೆ ಕಲಹ ಹುಟ್ಟಿಸುತ್ತಿರುವ ಪಕ್ಷ-ಸಂಘಟನೆಗಳೆಲ್ಲ ಇಂದು
ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿವೆ ಎಂದು ಸಿದ್ದರಾಮಯ್ಯ ಪೋಸ್ಟ್ ನಲ್ಲಿ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *