Site icon Kannada News-suddikshana

ತಮಿಳಿನ ಖ್ಯಾತ ನಟನ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್! ಯಾರು ಆ ಹೀರೋ ಗೊತ್ತಾ…?

SUDDIKSHANA KANNADA NEWS/ DAVANAGERE/ DATE:13-11-2024

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಮಾಸ್ ಫ್ಯಾನ್ಸ್ ಹಿಡಿದಿಡುವಂಥ ಟ್ರೈಲರ್ ರಿಲೀಸ್ ಆಗಿದೆ. ಎಲ್ಲೆಡೆ ಚಿತ್ರ ಬಿಡುಗಡೆಗೆ ಕಾದು ಕುಳಿತಿರುವ ಶಿವಣ್ಣ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್.

ಸೂಪರ್ ಸ್ಟಾರ್ ರಜಿನಿಕಾಂತ್ ಜೊತೆ ಜೈಲರ್ ಸಿನಿಮಾದಲ್ಲಿ ನಟಿಸಿದ್ದ ಶಿವರಾಜ್ ಕುಮಾರ್ ಮತ್ತೊಂದು ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಈ ಕುರಿತಂತೆ ಮಾತುಕತೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಮತ್ತೊಂದು ಭಾರೀ ಮೊತ್ತದ ಬಜೆಟ್ ನಲ್ಲಿ ಶಿವಣ್ಣ ನಟಿಸಲಿದ್ದು, ಈಗಾಗಲೇ ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಇಳಯದಳಪತಿ ವಿಜಯ್ ಅಭಿನಯದ ಕಟ್ಟಕಡೆಯ 69 ನೇ ಚಿತ್ರದಲ್ಲಿ ನಟಿಸುವಂತೆ ಶಿವಣ್ಣರನ್ನು ಕೇಳಿ ಕೊಂಡಿದ್ದು, ಇಲ್ಲೂ ಒಂದು ಒಳ್ಳೆ ಪಾತ್ರವನ್ನೇ ಆಫರ್ ನೀಡಲಾಗಿದೆ.

ಕೆವಿಎನ್ ಪ್ರೊಡಕ್ಷನ್ ಹೌಸ್‌ನ ಈ ಚಿತ್ರದ ಕುರಿತಂತೆ ಸಂದರ್ಶನವೊಂದರಲ್ಲಿ ಶಿವಣ್ಣ ಅವರೇ ಹೇಳಿಕೊಂಡಿದ್ದು, ಈ ಮೂಲಕ ಹ್ಯಾಟ್ರಿಕ್ ಹೀರೋ ಮತ್ತೊಂದು ತಮಿಳು ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದಾರೆ. ಇಳಯದಳಪತಿ ಕೊನೆ ಸಿನಿಮಾ ಆಗಿರುವ ಕಾರಣ ಫ್ಯಾನ್ಸ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿಜಯ್ ಜೊತೆ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ರಿವಿಲ್ ಆಗಿಲ್ಲ.

ಆದ್ರೆ, ವಿಜಯ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದು, ಒಂದ್ ಒಳ್ಳೆ ಪಾತ್ರದಲ್ಲೇ ನಟಿಸುವುದು ಫಿಕ್ಸ್ ಆಗಿದೆ. ಸದ್ಯಕ್ಕೆ ಡೇಟ್ಸ್ ಹೇಗೆ ಪ್ಲಾನ್ ಮಾಡ್ತಾರೋ ನೋಡ್ಬೇಕು. ನನ್ನ ಡೇಟ್ ನೋಡಿಕೊಂಡೇ ಬಹುಶಃ ಎಲ್ಲವೂ ಪ್ಲಾನ್ ಆಗುತ್ತದೆ ಅನಿಸುತ್ತದೆ ಎಂದಿದ್ದಾರೆ. ಈ ಮೂಲಕ ಕರುನಾಡ ಚಕ್ರವರ್ತಿ ತಮಿಳಿನಲ್ಲಿ ಅಬ್ಬರಿಸಲಿದ್ದಾರೆ. ಪವರ್ ಫುಲ್ ಕ್ಯಾರೆಕ್ಟರ್ ನೀಡುವುದು ಖಚಿತ.

Exit mobile version