ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಹಾಗೂ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರಿಗೆ ಆಶೀರ್ವಾದ ತೆಗೆದುಕೊಳ್ಳಿ. ಮೂವರು ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಂದಾಗಿ ನಡೆಯುವಂತೆ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಅವರು ಸಲಹೆ ನೀಡಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಮಾರೋಪದ ದಿನದಂದು ಮೂವರು ನಾಯಕರಿಗೆ ಒಗ್ಗಟ್ಟಿನ ಸಂದೇಶ ನೀಡಿದರು. ಈ ಮೂವರು ಆಶೀರ್ವಾದ ಪಡೆದ ಕಾರಣ ಭದ್ರಾವತಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಯಶಸ್ವಿಯಾಗಿ ಸಂಪನ್ನವಾಯಿತು ಎಂಬುದು ತಮ್ಮ ಭಾವನೆ ಎಂದು ಹೇಳಿದರು.
1. ವೈಮನಸ್ಸು ಮರೆತು ಒಂದಾಗಲು ಕರೆ
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ನಡುವಿನ ದಶಕಗಳ ರಾಜಕೀಯ ಸಂಘರ್ಷವನ್ನು ಶ್ರೀಗಳು ಮುಕ್ತವಾಗಿ ಪ್ರಸ್ತಾಪಿಸಿದ್ದಾರೆ. ಇಬ್ಬರೂ ಸಂಬಂಧದಲ್ಲಿ ಮಾವ-ಅಳಿಯಂದಿರಾದರೂ, ರಾಜಕೀಯವಾಗಿ ಉತ್ತರ-ದಕ್ಷಿಣದಂತಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಈ ಭಿನ್ನಾಭಿಪ್ರಾಯಗಳು ಸರಿಯಲ್ಲ ಎಂಬುದು ಶ್ರೀಗಳ ಸ್ಪಷ್ಟ ಸಂದೇಶ.
2. ಶ್ರೀಗಳ ಚಮತ್ಕಾರಿ ಸಲಹೆ: ‘ಬೀಗರಾಗಿ ಬಿಡಿ!’
ಜಗಳ ನಿಲ್ಲಿಸಲು ಶ್ರೀಗಳು ನೀಡಿದ ಒಂದು ಹಾಸ್ಯಭರಿತ ಹಾಗೂ ಚಾಣಾಕ್ಷತನದ ಸಲಹೆ ಎಂದರೆ “ಎರಡು ಕುಟುಂಬಗಳ ನಡುವೆ ಮದುವೆ ಸಂಬಂಧ ಏರ್ಪಡಲಿ” ಎಂಬುದು. ಈ ಮಾತು ಕೇಳಿ ನೆರೆದಿದ್ದ ಭಕ್ತ ಸಮೂಹದಲ್ಲಿ ನಗು ಮತ್ತು ಶಿಳ್ಳೆಗಳು ಮೊಳಗಿವೆ. ಕೌಟುಂಬಿಕ ಬಂಧ ಬೆಳೆದರೆ ರಾಜಕೀಯ ಕಹಿ ಕಡಿಮೆಯಾಗಬಹುದು ಎಂಬುದು ಅವರ ಆಶಯ.
3. ಬಿ.ಪಿ. ಹರೀಶ್ ಅವರಿಗೆ ‘ವ್ಯಾಟ್ಸಪ್’ ಎಚ್ಚರಿಕೆ
ಹರಿಹರ ಶಾಸಕ ಬಿ.ಪಿ. ಹರೀಶ್ ಅವರು ನಡೆಸುತ್ತಿರುವ ಟೀಕೆಗಳ ಬಗ್ಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಶ್ರೀಗಳಿಗೆ ಪುರಾವೆ (ವ್ಯಾಟ್ಸಪ್ ಸಂದೇಶ) ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಶ್ರೀಗಳು, ವೇದಿಕೆಯಲ್ಲೇ ಹರೀಶ್ ಅವರಿಗೆ ಎಚ್ಚರಿಕೆ ನೀಡಿ, ನಿಂದನಾ ರಾಜಕಾರಣ ಮಾಡದಂತೆ ಕಿವಿಮಾತು ಹೇಳಿದ್ದಾರೆ.
4. ಸಾಮಾಜಿಕ ಜಾಲತಾಣಗಳ ಬಗ್ಗೆ ಕಳಕಳಿ
ಇದೇ ಸಂದರ್ಭದಲ್ಲಿ ಶ್ರೀಗಳು ಒಂದು ಮಹತ್ವದ ವಿಚಾರ ಪ್ರಸ್ತಾಪಿಸಿದ್ದಾರೆ:
ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಕೆಟ್ಟ ಸುದ್ದಿಗಳು ಸಂಸಾರ ಮತ್ತು ಸಮಾಜವನ್ನು ಹಾಳು ಮಾಡುತ್ತಿವೆ.
ಸರ್ಕಾರವು ಇವುಗಳನ್ನು ನಿಯಂತ್ರಿಸಲು ಸೂಕ್ತ ಕಾಯಿದೆ ತರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯವಾಗಿ, ಭಿನ್ನಾಭಿಪ್ರಾಯ ಹೊಂದಿರುವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಜಿ. ಎಂ. ಸಿದ್ದೇಶ್ವರ ಹಾವು ಮುಂಗುಸಿಯಂತೆ. ಒಬ್ಬರು ಉತ್ತರ ಆದರೆ ಮತ್ತೊಬ್ಬರು ದಕ್ಷಿಣದಂತೆ ಇದ್ದಾರೆ. ಇದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿ ನಡೆಯುವಂತಾಗಿ ಸೂಚಿಸಿದರು.
ನಿಮ್ಮ ವೈಯಕ್ತಿಕ ಭಿನ್ನಾಭಿಪ್ರಾಯ ದೂರವಾಗಬೇಕಾದರೆ ಎರಡು ಕುಟುಂಬಗಳಲ್ಲಿ ಮದುವೆಯಾಗಬೇಕು. ಆಗ ಬೀಗರಾಗುತ್ತಾರೆ. ಜಗಳವೂ ಕಡಿಮೆಯಾಗುತ್ತದೆ. ಹಾಗಾಗಿ, ಇದೊಂದೇ ಇರುವ ಮಾರ್ಗ ಎಂದು ತಮಗನಿಸುತ್ತದೆ ಎಂದು ಸಿರಿಗೆರೆ ಶ್ರೀಗಳು ಹೇಳುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿದ್ದ ಭಕ್ತಾದಿಗಳು ಶಿಳ್ಳೆ, ಕೇಕೆ ಹಾಕಿದರು.
ಇಬ್ಬರು ನಾಯಕರೇ. ಯಾವುದೇ ಕಾರಣಕ್ಕೂ ಪರಸ್ಪರ ನಿಂದನೆ ಮಾಡಬಾರದು. ರಾಜಕೀಯ ಅಖಾಡದಲ್ಲಿ ಜಿ. ಎಂ. ಸಿದ್ದೇಶ್ವರ ಮತ್ತು ಎಸ್. ಎಸ್. ಮಲ್ಲಿಕಾರ್ಜುನ್ ಅವರು ಹಾವು ಮುಂಗುಸಿಯಂತೆ ಸೆಣಸಾಡುತ್ತಾರೆ. ಇವರ ರಾಜಕೀಯ ವೈಮನಸ್ಸು ನೋಡಿ ನಮಗೂ ಸಾಕಾಗಿದೆ. ಅದಕ್ಕೆ ಕುಟುಂಬಗಳಲ್ಲಿ ಮದುವೆ ಮಾಡಿಸಿ ಬಿಡೋಣ ಎಂಬ ಆಲೋಚನೆ ತಮ್ಮದು. ಆಗಲಾದರೂ ಇಬ್ಬರ ನಡುವಿನ ಜಗಳ ನಿಲ್ಲಬಹುದು ಎಂದು ಹೇಳಿದರು.
ಮಲ್ಲಿಕಾರ್ಜುನ್ ಮತ್ತು ಸಿದ್ದೇಶ್ವರ ಅವರು ಸಂಬಂಧದಲ್ಲಿ ಮಾವ ಅಳಿಯಂದಿರು. ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಸಂಬಂಧಿಕರಾಗಿದ್ರು ಹೇಗೆ ಹೊಡೆದಾಡಿದರೋ, ಇವರ ಪರಿಸ್ಥಿತಿಯೂ ಅದೇ ರೀತಿ ಇರುವಂತೆ ತೋರುತ್ತಿದೆ. ಇವರಿಬ್ಬರು ಶತ್ರುಗಳಲ್ಲ,. ಇನ್ನು ಮುಂದೆ ವೈಯಕ್ತಿಕ ಟೀಕೆ ಬಿಟ್ಟು ಭಿನ್ನಾಭಿಪ್ರಾಯಗಳಿದ್ದರೆ ಖಾಸಗಿಯಾಗಿ ಕುಳಿತು ಮಾತನಾಡಿ ಪರಿಹರಿಸಿಕೊಳ್ಳಿ ಎಂದು ಶ್ರೀಗಳು ಸಲಹೆ ನೀಡಿದರು.
ಬಿ. ಪಿ. ಹರೀಶ್ ಗೆ ಎಚ್ಚರಿಕೆ:
ಹರಿಹರ ಶಾಸಕ ಬಿ. ಪಿ. ಹರೀಶ್ ಅವರಿಗೆ ಸಿರಿಗೆರೆ ಶ್ರೀಗಳು ಎಚ್ಚರಿಕೆ ನೀಡಿದರು. ನಿಮ್ಮ ಟೀಕೆಗಳ ಬಗ್ಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ವ್ಯಾಟ್ಸಪ್ ನಲ್ಲಿ ತೋರಿಸಿದ್ದಾರೆ. ಈ ರೀತಿ ನಿಂದನೆ ಮಾಡುವುದು ಒಳ್ಳೆಯದಲ್ಲ, ಸರಿಯಾದದ್ದೂ
ಅಲ್ಲ ಎಂದು ಸಿರಿಗೆರೆ ಶ್ರೀಗಳು ಹೇಳಿದರು.
ರಾಜಕಾರಣಿಗಳು ಪರಸ್ಪರ ಮಾತುಕತೆ ನಡೆಸಿ ಏಕತೆ ಕಾಪಾಡಬೇಕು. ಮಲ್ಲಿಕಾರ್ಜುನ, ಸಿದ್ದೇಶ್ವರ ಹಾಗೂ ಬಿ.ಪಿ. ಹರೀಶ್ ಅವರು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಿ ನಡೆಯಬೇಕು ಎಂದು ಸಲಹೆ ನೀಡಿದರು. ಎಲ್ಲಾ ರಾಜಕೀಯ ಧುರೀಣರು ನಮ್ಮ ಮಠದ ಮೇಲೆ ಶ್ರದ್ಧೆ ಭಕ್ತಿಯಿಂದ ಬರುತ್ತಾರೆ. ವೀರ ಯೋಧರ ಕುಟುಂಬಗಳಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಶ್ರೀಗಳು ತಿಳಿಸಿದರು. ಅನೇಕ ಸಂಸಾರಗಳು ಹಾಳಾಗಿರುವುದು ಸಾಮಾಜಿಕ ಜಾಲತಾಣಗಳ ಕೆಟ್ಟ ಸುದ್ದಿಗಳಿಂದ. ಹಾಗಾಗಿ ಸರ್ಕಾರವು ಸಾಮಾಜಿಕ ಜಾಲತಾಣಗಳಿಗೆ ಕಾಯಿದೆ ತರಬೇಕಿದೆ ಎಂದು ಅಭಿಪ್ರಾಯಪಟ್ಟರು.
- B. P. HARISH
- Davanagere Politics
- Dr. Shivamurthy Shivacharya Swamiji.
- G.M. Siddeshwara
- Political Rivalry
- S. S. MALLIKARJUN
- Sirigere Shri
- Taralabalu Hunnime 2026
- Unity Message
- ಎಸ್. ಎಸ್. ಮಲ್ಲಿಕಾರ್ಜುನ್
- ಜಿ. ಎಂ. ಸಿದ್ದೇಶ್ವರ
- ತರಳಬಾಳು ಹುಣ್ಣಿಮೆ 2026
- ದಾವಣಗೆರೆ ರಾಜಕೀಯ
- ಬಿ. ಪಿ. ಹರೀಶ್
- ಭದ್ರಾವತಿ ಸಮಾವೇಶ.
- ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
- ಸಿರಿಗೆರೆ ಶ್ರೀಗಳು





Leave a comment