Site icon Kannada News-suddikshana

ದಾವಣಗೆರೆಯ “ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ”

ದಾವಣಗೆರೆ

SUDDIKSHANA KANNADA NEWS/ DAVANAGERE/DATE:15_08_2025

ದಾವಣಗೆರೆ: ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. 3 ನೇ ತರಗತಿ ವಿದ್ಯಾರ್ಥಿನಿ ಚೇತನಾ ಧ್ವಜಾರೋಹಣ ಮಾಡಿದಳು.

READ ALSO THIS STORY: ಧರ್ಮಸ್ಥಳ ದೇಗುಲದ ಮಾಹಿತಿ ಕೇಂದ್ರದಿಂದ ಶವ ಹೂತಾಕಲು ಬರ್ತಿತ್ತು ಆದೇಶ, ಶೇ.90ರಷ್ಟು ಹೆಣ್ಮಕ್ಕಳ ಸಮಾಧಿ ಮಾಡಿದ್ದೇನೆ: ಮುಸುಕುಧಾರಿ ಸ್ಫೋಟಕ ಮಾಹಿತಿ!

ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಧರಿಸಿದ PreKG , LKG ಹಾಗೂ UKG ಮಕ್ಕಳು ಗಮನ ಸೆಳೆದರು. LKG ಯ ನುಸ್ರಖಾಜ್ , ಜಾಹ್ನವ್ ಹಾಗೂ ಗಗನ್, ಯುಕೆಜಿ ಯ ಅಹಾನ, ಸಾತ್ವಿಕ್ ಮತ್ತು ಕಾರುಣ್ಯ ಇವರು ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಿದರು.

2 ನೇ ತರಗತಿಯ ಅಥರ್ವ ,ಸಂಗೊಳ್ಳಿ ರಾಯಣ್ಣನ ಏಕಪಾತ್ರಾಭಿನಯ ಪ್ರದರ್ಶಿಸಿದನು. 6ನೇ ತರಗತಿ ಮಕ್ಕಳು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು. ವಿವಿಧ ತರಗತಿಯ ಒಟ್ಟು 80 ಮಕ್ಕಳಿಂದ “ಮಾತೆ ಪೂಜಕ” ಎಂಬ ಹಾಡಿಗೆ ಸಾಮೂಹಿಕವಾಗಿ ಹಾಡಿದ್ದು ವಿಶೇಷವಾಗಿತ್ತು .ಹೈಸ್ಕೂಲ್ ವಿದ್ಯಾರ್ಥಿಗಳಿಂದ ಕಾರ್ಗಿಲ್ ವಿಜಯೋತ್ಸವ ನಾಟಕ ಪ್ರದರ್ಶಿಸಲಾಯಿತು.

ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ , ಬೋಧಕ ಹಾಗೂ ಬೋಧಕೇತರ ವರ್ಗದವರಿಂದ ಪಾಲಕರಿಂದ ಮೈದಾನ ತುಂಬಿತ್ತು. ಸಂಸ್ಥೆಯ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿ ಕಾರ್ಯಕ್ರಮ ವೀಕ್ಷಿಸಿದರು.

Exit mobile version