Site icon Kannada News-suddikshana

ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಲೋಕಾರ್ಪಣೆಗೊಳಿಸಿದ “ಸ್ಮಾರ್ಟ್ ಹೆಲ್ತ್ ಕಿಯೋಸ್ಕ್” ಪ್ರಯೋಜನಗಳು ಏನು ಗೊತ್ತಾ…?

SUDDIKSHANA KANNADA NEWS/ DAVANAGERE/ DATE:17-09-2023

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಉದ್ಘಾಟಿಸಿದ “ಸ್ಮಾರ್ಟ್ ಹೆಲ್ತ್ ಕಿಯೋಸ್ಕ್” (Health ATM) ಕಾರ್ಯನಿರ್ವಹಿಸುವುದು ಹಾಗೂ ಪ್ರಯೋಜನ ಏನು ಎಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಈ ಕುರಿತ ಸಮಗ್ರ ಮಾಹಿತಿ ನಿಮಗಾಗಿ.

ಆರೋಗ್ಯ ಮಿತ್ರ:

ಸ್ಮಾರ್ಟ್ ಹೆಲ್ತ್ ಕಿಯೋಸ್ಕ್ ಗಳ ಮೂಲಕ ತಪಾಸಣೆ ಮತ್ತು ಶೀಘ್ರ ರೋಗ ಪತ್ತೆ ಹಾಗೂ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಸಿ ವಿಶಿಷ್ಟ ಹೆಲ್ತ್ ಎಟಿಎಂ ಜಾರಿ.

ಈ ಸುದ್ದಿಯನ್ನೂ ಓದಿ: 

ಕೋಟ್ಯಂತರ ರೂ. ಒಡತಿ ಚೈತ್ರಾ ಕುಂದಾಪುರ (Kundapur) ಬಗ್ಗೆ ನಿಮಗೆಷ್ಟು ಗೊತ್ತು…? ಗೋವಿಂದ ಪೂಜಾರಿ ಹಿನ್ನೆಲೆ ಏನು..? ಕೇವಲ 9 ವರ್ಷಗಳಲ್ಲಿ ಬೆಳೆದಿದ್ದು, ಹಣ ಮಾಡಿದ್ದೇ ರೋಚಕ

ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲಬುರಗಿ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ವತಿಯಿಂದ ಜಿಲ್ಲೆಯಲ್ಲಿ ‘ಆರೋಗ್ಯ ಮಿತ್ರ’ ಯೋಜನೆಯನ್ನು ಜಾರಿ ಮಾಡುತ್ತಿದ್ದು, ಕಲಬುರಗಿ ಜಿಲ್ಲೆಗೆ ಹೆಚ್.ಪಿ ಎಂಟರ್‌ಪ್ರೈಸಸ್ ವತಿಯಿಂದ 25 ಹೆಲ್ತ್ ಎಟಿಎಂ ಘಟಕಗಳನ್ನು CSR ಅನುದಾನದ ಅಡಿಯಲ್ಲಿ ಪಡೆದು ಇಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ವೇಳೆ ಮಾನ್ಯ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ(Siddaramaiah)ನವರು ಲೋಕಾರ್ಪಣೆಗೊಳಿಸಿದರು.

ಜನಸ್ನೇಹಿ ಹೆಲ್ತ್ ಎಟಿಎಂ:

ಹೆಲ್ತ್ ಎಟಿಎಂನ ಪ್ರಯೋಜನೆಗಳು:

 

 

Exit mobile version