Site icon Kannada News-suddikshana

ನಾನು ಆ ರೀತಿ ಮಾತನಾಡಿಲ್ಲ, ಹೇಳಿಕೆ ತಿರುಚಲಾಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ

SUDDIKSHANA KANNADA NEWS/ DAVANAGERE/ 04-04-2023

 

ಹೊಸದಿಲ್ಲಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ (ELECTION) ಯಲ್ಲಿ ಕಾಂಗ್ರೆಸ್‌ (CONGRESS) ನ ಮುಖ್ಯಮಂತ್ರಿ ಅಭ್ಯರ್ಥಿ ಕುರಿತಂತೆ ಮಾತನಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಹೊಸದಿಲ್ಲಿ (NEWDELHI) ಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು,, ನಾನು ಕೇವಲ ಆ ಹುದ್ದೆಯ ಆಕಾಂಕ್ಷಿ ಎಂದಷ್ಟೇ ಹೇಳಿದ್ದೆ. ಆದ್ರೆ, ಆ ಹೇಳಿಕೆ ಬೇರೆಯದ್ದೇ ಅರ್ಥವಾಗಿ ಬೇರೆ ಸಂದೇಶ ಹೋಗಿದೆ ಎಂದು ಸಮಜಾಯಿಷಿ ನೀಡಿದರು.

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಎಐಸಿಸಿ (AICC) ಸಭೆಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ರಾಜ್ಯದ ಜನರು.
ನಾನು ಹೇಳಿದ್ದು ಹಲವರು ಆಕಾಂಕ್ಷಿಗಳಿದ್ದಾರೆ. ಸಿಎಂ ಆಗುವ ಅರ್ಹತೆ ಹೊಂದಿದ್ದಾರೆ. ಜೊತೆಗೆ ನಾನು ಹೇಳಿದ್ದು ಗೆದ್ದ ಶಾಸಕರು ಹೈಕಮಾಂಡ್ ಗೆ ಯಾರು ಸಿಎಂ ಆಗಬೇಕು ಎಂಬುದನ್ನು ತಿಳಿಸುತ್ತಾರೆ. ಆಮೇಲೆ ಪಕ್ಷದ ಹೈಕಮಾಂಡ್
ನಿರ್ಧಾರ ತೆಗೆದುಕೊಳ್ಳುತ್ತದೆ. ಆದ್ರೆ, ನನ್ನ ಹೇಳಿಕೆ ತಿರುಚಲಾಗಿದೆ ಎಂದು ಹೇಳಿದರು.

”ಮಾಧ್ಯಮಗಳಲ್ಲಿ ಬರುತ್ತಿರುವುದು ಸಂಪೂರ್ಣ ಸುಳ್ಳು, ನಾನು ಹೇಳಿದ್ದೆಲ್ಲ ಪ್ರಜಾಪ್ರಭುತ್ವದ ಮೂಲಕ ಸಿಎಂ ಆಯ್ಕೆಯಾಗಲಿದೆ, ನಾನು ಸಿಎಂ ಆಕಾಂಕ್ಷಿ ಮತ್ತು ಅವರೂ (ಡಿಕೆ ಶಿವಕುಮಾರ್) ಆಕಾಂಕ್ಷಿ. ಅವರು (ಮಾಧ್ಯಮ) ಏನೇ ಆಗಲಿ. ವರದಿ ಮಾಡಿರುವುದು ಸುಳ್ಳು’ ಎಂದು ಸಿದ್ದರಾಮಯ್ಯ ಹೇಳಿದರು.

“ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯು ಸಿಎಂ ಆಯ್ಕೆ ಮಾಡುತ್ತದೆ ಎಂದರು.

ಸಿದ್ದರಾಮಯ್ಯ ಮತ್ತು ರಾಜ್ಯಾಧ್ಯಕ್ಷ ಶಿವಕುಮಾರ್ ನಡುವೆ ವಾಕ್ ಸಮರ ಮುಂದುವರಿದಿರುವ ಮಧ್ಯೆ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕಾಂಗ್ರೆಸ್‌ (CONGRESS) ನಲ್ಲಿ ರೇಸ್ ಜೋರಾಗಿದೆ.

ಪಕ್ಷದ ಬಹುತೇಕ ನಾಯಕರ ಪ್ರಕಾರ, ಹಲವು ಕಾಂಗ್ರೆಸ್ (CONGRESS)  ನಾಯಕರಿಗೆ (LEADERS)  ಒಳಜಗಳಗಳು ‘ದುಃಸ್ವಪ್ನ’ವಾಗಿ ಪರಿಣಮಿಸಿವೆ. ವಿಧಾನಸಭೆಯಲ್ಲಿ 224 ಸ್ಥಾನಗಳನ್ನು ಹೊಂದಿರುವ ಕರ್ನಾಟಕವು ಪ್ರಸ್ತುತ ಆಡಳಿತಾರೂಢ ಬಿಜೆಪಿಯ 119 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್ 75 ಮತ್ತು ಮಿತ್ರಪಕ್ಷ ಜೆಡಿಎಸ್ 28 ಸ್ಥಾನಗಳನ್ನು ಹೊಂದಿದೆ.

 

Exit mobile version