Site icon Kannada News-suddikshana

BIG BREAKING: ದರ್ಶನ್ ತೂಗುದೀಪ್ ಪ್ರೇಯಸಿ ಪವಿತ್ರಾ ಗೌಡಗೆ ಶಾಕ್: ಜಾಮೀನು ಅರ್ಜಿ ವಜಾಗೊಳಿಸಿದ ಸೆಷನ್ಸ್ ಕೋರ್ಟ್

ದರ್ಶನ್ ತೂಗುದೀಪ್

SUDDIKSHANA KANNADA NEWS/ DAVANAGERE/DATE:02_09_2025

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮೊದಲ ಆರೋಪಿ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಆಪ್ತ ಗೆಳತಿ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದೆ.

ಈ ಸುದ್ದಿಯನ್ನೂ ಓದಿ: ಮಸೀದಿ ಪಕ್ಕದಲ್ಲೇ ಗಣಪತಿ ಇಟ್ಟು ಕೇಕೆ ಹೊಡೆಯಬೇಕಾ, ತಣ್ಣಗಿರದಿದ್ರೆ ಒಳಗೆ ಹಾಕಿಸ್ತೇನೆ: ಎಸ್. ಎಸ್. ಮಲ್ಲಿಕಾರ್ಜುನ್ ಗರಂ!

ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಪವಿತ್ರಾ ಗೌಡ ಬಿಗ್ ಶಾಕ್ ಕೊಟ್ಟಿರುವ 57ನೇ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದೆ. ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಪವಿತ್ರಾ ಗೌಡ, ದರ್ಶನ್ ತೂಗುದೀಪ ಸೇರಿದಂತೆ ಆರೋಪಿಗಳ ಜಾಮೀನನ್ನು ವಜಾಗೊಳಿಸಿತ್ತು. ಹೈಕೋರ್ಟ್ ನೀಡಿದ್ದ ಜಾಮೀನು ವಜಾಗೊಳಿಸಿತ್ತು. ಏಳು ಜನ ಆರೋಪಿಗಳು ಜೈಲು ಸೇರಿದ್ದರು. ಪರಪ್ಪನ ಅಗ್ರಹಾರದಲ್ಲಿದ್ದ ಪವಿತ್ರಾ ಗೌಡ ಜೈಲಿನಲ್ಲೇ ಕಂಬಿ ಎಣಿಸುವಂತಾಗಿದೆ.

ಬೇಲ್ ಅರ್ಜಿ ವಜಾಗೊಳಿಸಿದ ಕೋರ್ಟ್ ಸರ್ಕಾರಿ ಪರ ವಕೀಲರ ವಾದ ಮಂಡಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪವಿತ್ರಾ ಗೌಡಳನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿತ್ತು. ದರ್ಶನ್ ತೂಗುದೀಪ ಸೇರಿದಂತೆ
ಹಲವರು ಬಂಧನಕ್ಕೊಳಗಾಗಿದ್ದಾರೆ. ಸುಪ್ರೀಂಕೋರ್ಟ್ ಆರೋಪಿಗಳ ಪಾತ್ರ ಗಟ್ಟಿಯಾಗಿದೆ ಎಂದು ಭಾವಿಸಿದ್ದು, ಸ್ಪಷ್ಟವಾದ ಆದೇಶ ನೀಡಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ಪವಿತ್ರಾ ಗೌಡಳಿಗೆ ಜಾಮೀನು ನೀಡಬಾರದು ಎಂದು
ವಾದ ಮಂಡಿಸಿದ್ದರು. ಇದನ್ನು ಪುರಸ್ಕರಿಸಿದ ಸೆಷನ್ಸ್ ಕೋರ್ಟ್ ಜಾಮೀನು ವಜಾಗೊಳಿಸಿ ತೀರ್ಪು ನೀಡಿದೆ.

Exit mobile version