Site icon Kannada News-suddikshana

ಹೋಳಿಗೆ ಪ್ರಿಯರಿಗೆ ಶಾಕ್! ಈ ಒಬ್ಬಟ್ಟು ಡೇಂಜರ್…ಹುಷಾರ್!

SUDDIKSHANA KANNADA NEWS/ DAVANAGERE/ DATE:04-03-2025

ಬೆಂಗಳೂರು: ಒಬ್ಬಟ್ಟು ಇಲ್ಲವೇ ಹೋಳಿಗೆ ಹಿಂದೂಗಳ ಹಬ್ಬದಲ್ಲಿ ತಯಾರಿಸುವ ಸಿಹಿ ಖಾದ್ಯ. ಇನ್ನೇನೂ ಹೋಳಿ, ಯುಗಾದಿ ಸೇರಿದಂತೆ ಸಾಲು ಸಾಲು ಹಬ್ಬಗಳು, ಜಾತ್ರೆಗಳು ಬರುತ್ತಿವೆ. ಆದ್ರೆ ಈಗ ಒಬ್ಬಟ್ಟು ತಂದಿಟ್ಟಿದೆ ಆಪತ್ತು.

ಹೌದು. ರೆಡಿಮೇಡ್ ಹೋಳಿಗೆ ತಯಾರಿಸುವಲ್ಲಿಯೂ ಪ್ಲಾಸ್ಟಿಕ್ ಬಳಸುತ್ತಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಯಾರೇ ಆಗಲಿ ಹಬ್ಬಗಳು ಬಂದಾಗ ಸ್ವೀಟ್‌ ಖರೀದಿಸೋದು ಸಾಮಾನ್ಯ. ಅದರಲ್ಲೂ ಯುಗಾದಿ ಹಬ್ಬ ಬಂದ್ರೆ ಸಾಕು ಹೋಳಿಗೆ ಅಂಗಡಿಗಳಿಗೆ ಬೇಡಿಗೆ ಇರುತ್ತದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಇಡ್ಲಿಯಿಂದ ಕ್ಯಾನ್ಸರ್ ಬರುತ್ತೆ ಎಂಬ ವರದಿ ಆರೋಗ್ಯ ಇಲಾಖೆ ಕೈ ಸೇರಿತ್ತು.

ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ಕೆಲ ಆಹಾರಗಳ ಮೇಲೆ ಕಟ್ಟುನಿಟ್ಟಿನ ನಿಯಮ ವಿಧಿಸಿತ್ತು. ಇದೀಗ ಮತ್ತೊಂದು ತಿಂಡಿ ಮೇಲೆ ಸರ್ಕಾರ ವಾರ್ನಿಂಗ್ ನೀಡಿದೆ. ಯುಗಾದಿ ಹಬ್ಬಕ್ಕೆ ರೆಡಿಮೇಡ್ ಹೋಳಿಗೆ ಸೇವಿಸುವವರಿಗೆ ಎಚ್ಚರಿಕೆ
ನೀಡಲಾಗಿದೆ.

ಅಂಗಡಿಗಳಲ್ಲಿ ರೆಡಿಮೇಡ್ ಹೋಳಿಗೆ ತಯಾರಿಕೆಯಲ್ಲೂ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಇದೀಗ ರಾಜ್ಯದಾದ್ಯಂತ ಹೋಳಿಗೆ ಅಂಗಡಿಗಳ ಮೇಲೆ ಆಹಾರ ಇಲಾಖೆ ದಾಳಿ ಮಾಡಿದೆ. ಪ್ಲಾಸ್ಟಿಕ್ ಬಳಕೆ ಮಾಡಿರೋ
ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಹೋಳಿಗೆಗೆ ಪ್ಲಾಸ್ಟಿಕ್ ಕವರ್ ಬಳಸಿದ್ರೆ ವಿಷಕಾರಿ ಅಂಶ ಹೋಳಿಗೆ ಸೇರೋ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಈ ಬೆನ್ನಲ್ಲೇ ಹೋಳಿಗೆಯಲ್ಲೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.

Exit mobile version