Home ದಾವಣಗೆರೆ ಬಿ. ವೈ. ರಾಘವೇಂದ್ರ ಗೆಲ್ಲಿಸಿ ಎಂದಿದ್ದರು ಶಾಮನೂರು ಶಿವಶಂಕರಪ್ಪ: ಅಂತಿಮ ದರ್ಶನ ಪಡೆದ ಶಿವಮೊಗ್ಗ ಸಂಸದ
ದಾವಣಗೆರೆನವದೆಹಲಿಬೆಂಗಳೂರು

ಬಿ. ವೈ. ರಾಘವೇಂದ್ರ ಗೆಲ್ಲಿಸಿ ಎಂದಿದ್ದರು ಶಾಮನೂರು ಶಿವಶಂಕರಪ್ಪ: ಅಂತಿಮ ದರ್ಶನ ಪಡೆದ ಶಿವಮೊಗ್ಗ ಸಂಸದ

Share
Share

SUDDIKSHANA KANNADA NEWS/DAVANAGERE/DATE:15_12_2025

ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿನ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪನವರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಪಡೆದರು.

ಈ ವೇಳೆ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಜೊತೆ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ, ಅವರ ಕುಟುಂಬ ವರ್ಗಕ್ಕೆ, ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಬಿ. ವೈ. ರಾಘವೇಂದ್ರ ಪ್ರಾರ್ಥಿಸಿದರು.

ಕಳೆದ ಲೋಕಸಭೆ ಚುನಾವಣೆಗೆ ಮುನ್ನ ಶಿವಮೊಗ್ಗದ ಕಾರ್ಯಕ್ರಮವೊಂದರಲ್ಲಿ ಶಾಮನೂರು ಶಿವಶಂಕರಪ್ಪರು ಬಿ. ವೈ. ರಾಘವೇಂದ್ರ ಅವರನ್ನು ಮನದುಂಬಿ ಹೊಗಳಿದ್ದರು. ಮಾತ್ರವಲ್ಲ, ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸುವಂತೆ ಕರೆ ನೀಡಿದ್ದರು. ರಾಘವೇಂದ್ರ ಜನಪರ ಕಾಳಜಿಯುಳ್ಳ ನಾಯಕ. ಅಭಿವೃದ್ಧಿಪರ ಚಿಂತಕ. ಇಂಥವರನ್ನು ಗೆಲ್ಲಿಸಿ ಎಂದು ಶಾಮನೂರು ಶಿವಶಂಕರಪ್ಪರು ಕರೆ ನೀಡಿದ್ದರು.

Share

Leave a comment

Leave a Reply

Your email address will not be published. Required fields are marked *