Site icon Kannada News-suddikshana

ಸೇತುವೆಯಿಂದ ಕೆಳಗುರುಳಿದ ಕಾರು..! ಮಕ್ಕಳು ಸೇರಿ ಆರು ಮಂದಿಗೆ ಗಾಯ

ಶಿವಮೊಗ್ಗ: ಸಿಗಂದೂರು, ಜೋಗ, ಕೊಲ್ಲೂರು ಪ್ರವಾಸ ಮುಗಿಸಿ ಚಿತ್ರದುರ್ಗದ ತಮ್ಮೂರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿ ಆರು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಗರದಹಳ್ಳಿ ಅಶೋಕನಗರದ ನಡುವೆ ಸೇತುವೆಯಿಂದ ಕೆಳಗೆ ಚಾನಲ್‌ಗೆ ಕಾರು ಹಾರಿದೆ. ಸೋಮವಾರ ರಾತ್ರಿ 2.30ರ ಹೊತ್ತಿಗೆ ಘಟನೆ ಸಂಭವಿಸಿದೆ. ಚಾಲಕ ಕಾರ್ತಿಕ್‌ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Exit mobile version