Site icon Kannada News-suddikshana

ಚನ್ನಗಿರಿ ಕಾಂಗ್ರೆಸ್ ಟಿಕೆಟ್ ಶಿವಗಂಗಾ ವಿ. ಬಸವರಾಜ್ ಗೆ: ಜಗಳೂರು, ಹೊನ್ನಾಳಿ, ಹರಿಹರ ಪೆಂಡಿಂಗ್…!

SUDDIKSHANA KANNADA NEWS| DAVANAGERE| 06-04-2023

ದಾವಣಗೆರೆ: ಜಿಲ್ಲೆಯ ಚನ್ನಗಿರಿ (CHANNAGIRI) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಶಿವಗಂಗಾ ವಿ. ಬಸವರಾಜ್ ಅವರಿಗೆ ಸಿಕ್ಕಿದೆ.

ಮಾಜಿ ಶಾಸಕ ವಡ್ನಾಳ್ ರಾಜಣ್ಣ(RAJANNA), ವಡ್ನಾಳ್ ಅಶೋಕ್, ಜಗದೀಶ್ ಅವರ ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ಕಾಂಗ್ರೆಸ್ (CONGRESS) ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಶಿವಗಂಗಾ ಬಿ. ಬಸವರಾಜ್ ಅವರಿಗೆ ಟಿಕೆಟ್ (TICKET)ನೀಡಿದೆ. ವಯಸ್ಸು ಹಾಗೂ ಆರೋಗ್ಯದ ಕಾರಣ ಸ್ಪರ್ಧೆ ಮಾಡಲು ವಡ್ನಾಳ್ ರಾಜಣ್ಣ ನಿರಾಸಕ್ತಿ ತೋರಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಿವಗಂಗಾ ಬಸವರಾಜ್ ಅವರು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾಗಿದ್ದರು. ಬಿಜೆಪಿಯಲ್ಲಿ ಇನ್ನು ಟಿಕೆಟ್ ಘೋಷಣೆ ಆಗಿಲ್ಲ. ಈ ನಡುವೆ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಆಗ ಬಿಜೆಪಿ ಹುರಿಯಾಳು ಯಾರಾಗ್ತಾರೆ ಎಂಬ ಕುತೂಹಲ ಕೆರಳಿಸಿದೆ.

ಜಗಳೂರು, ಹೊನ್ನಾಳಿ, ಹರಿಹರ ಟಿಕೆಟ್ ಯಾರಿಗೂ ಘೋಷಿಸಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯರ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತಾರೋ ಇಲ್ಲವೋ ಎಂಬ ಸಸ್ಪೆನ್ಸ್ ಮುಂದುವರಿದಿದೆ.

Exit mobile version