Site icon Kannada News-suddikshana

Shamanuru Shivashankarappa:ಶಕ್ತಿ ಯೋಜನೆಗೆ ಷರತ್ತು ವಿಧಿಸಿರುವುದಕ್ಕೆ ಶಾಮನೂರು ಶಿವಶಂಕರಪ್ಪ ಏನಂದ್ರು…? ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದಿದ್ಯಾಕೆ ಕೈ ಹಿರಿಯ ಶಾಸಕ…?

Shamanur Shivashankarappa

Shamanur Shivashankarappa

SUDDIKSHANA KANNADA NEWS/ DAVANAGERE/ DATE:11-06-2023

ದಾವಣಗೆರೆ: ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ. ಅದೇ ರೀತಿಯಲ್ಲಿ ದಾವಣಗೆರೆಯಲ್ಲಿಯೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪShamanuru Shivashankarappa ಹಾಗೂ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಬಸ್ ಪ್ರಯಾಣಕ್ಕೆ ಚಾಲನೆ ಕೊಟ್ಟರು.

ಸಮಾಧಾನ ಇಲ್ಲ:

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ನಗರದ ಹೈಸ್ಕೂಲ್ ಮೈದಾನದ ಪಕ್ಕದಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಶಕ್ತಿ ಯೋಜನೆ ಅತ್ಯುತ್ತಮ ಯೋಜನೆ. ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದ್ರೆ, ರಾಜ್ಯ ಸರ್ಕಾರವು ಯಾಕೆ ಷರತ್ತು ವಿಧಿಸಿದೆ ಎಂಬುದು ಗೊತ್ತಿಲ್ಲ. ಷರತ್ತು ಮಾಡಿರುವುದು ಸರಿಯಲ್ಲ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಅಲ್ಲಿ ನನ್ನ ಅಭಿಪ್ರಾಯ ತಿಳಿಸುತ್ತೇನೆ. ಕಂಡೀಷನ್ ವಿಧಿಸಿರುವುದು ವೈಯಕ್ತಿಕವಾಗಿ ನನಗೆ ಸಮಾಧಾನ ಇಲ್ಲ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ:

ದಾವಣಗೆರೆಯ ಹಳೇಬಿಸ್ಲೇರಿಯಲ್ಲಿ ನಿಗೂಢವಾಗಿ ವಿವಾಹಿತ ಮರಣ: ಸಾವಿನ ಹಿಂದಿದೆಯಾ “ಹೆಣ್ಣಿನ” ನೆರಳು…?

ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದೇ ಕಾಂಗ್ರೆಸ್:

ಬಿಜೆಪಿಯವರು ಪದೇ ಪದೇ ಸುಳ್ಳು ಹೇಳಿದ ಕಾರಣಕ್ಕೆ ಈ ಹಿಂದೆ ಕಾಂಗ್ರೆಸ್ ಮಾಡಿದ್ದ ಒಳ್ಳೆಯ ಕೆಲಸವನ್ನು ಜನರು ಮರೆತಿದ್ದರು. ದೇಶದಲ್ಲಿ ಮೊದಲ ಬಾರಿಗೆ ರಾಜಕಾರಣದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷ. ನಾವು ನುಡಿದಂತೆ ನಡೆಯುತ್ತೇವೆ. ಈ ಹಿಂದೆಯೂ ನುಡಿದಂತೆ ನಡೆದಿದ್ದೇವೆ. ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡಲಿ. ಗ್ರಾಮೀಣ ಪ್ರದೇಶದ ಮಹಿಳೆಯರು, ಯುವತಿಯರು, ಶಾಲಾ ಮಕ್ಕಳಿಗೆ ಈ ಯೋಜನೆ ಉಪಯೋಗ ಆಗುತ್ತದೆ ಎಂದು ತಿಳಿಸಿದರು.

ತೊಂದರೆಯಾದ್ರೆ ಶಿಸ್ತು ಕ್ರಮ:

ಯಾವ ಮಹಿಳೆಗೂ ಪ್ರಯಾಣಕ್ಕೆ ತೊಂದರೆ ಆಗಬಾರದು. ಈ ನಿಟ್ಟಿನಲ್ಲಿ ಕೆ ಎಸ್ ಆರ್ ಟಿ ಸಿ ಸಿಬ್ಬಂದಿ ನೋಡಿಕೊಳ್ಳಬೇಕು. ಒಂದು ವೇಳೆ ಇದನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ ಸಿಬ್ಬಂದಿ ವಿರುದ್ದ ರಾಜ್ಯ ಸರ್ಕಾರವು ಶಿಸ್ತು ಕ್ರಮ ತೆಗೆದುಕೊಳ್ಳುತ್ತದೆ ಎಂದು ಶಾಮನೂರು ಶಿವಶಂಕರಪ್ಪ Shamanuru Shivashankarappaರು ಎಚ್ಚರಿಕೆ ನೀಡಿದರು.

ಮಹಿಳೆಯರು ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲಿ. ಸರ್ಕಾರದ ಯೋಜನೆಯು ಪರಿಣಾಮಕಾರಿಯಾಗಿ ಮಹಿಳೆಯರನ್ನು ತಲುಪಬೇಕು ಎಂದು ಹೇಳಿದರು.

ಅಸುರರ ಸಂಹಾರದ ಕಥೆ:

ಅಸುರರ ಕಾಟಕ್ಕೆ ಬ್ರಹ್ಮ, ವಿಷ್ಣು ಮಹೇಶ್ವರ ತತ್ತರಿಸಿ ಹೋಗಿದ್ದರು. ಆಗ ಪಾರ್ವತಿ ಮದುವೆ ಮಾಡಿ ಅಸುರರ ಸಂಹಾರ ಮಾಡಲಾಯಿತು. ಆಗ ಎದ್ದಿದ್ದ ಸಮಸ್ಯೆಯನ್ನು ಯುದ್ಧ ಮಾಡಿ ಕೊಂದು ಹಾಕುವ ಮೂಲಕ ಸಮಸ್ಯೆ ಬಗೆಹರಿದಿತ್ತು. ಅದೇ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಮೂಲಕ ಒಳ್ಳೆಯ ಯೋಜನೆಯನ್ನು ಸರ್ಕಾರ ಜಾರಿ ಮಾಡುತ್ತಿದೆ ಎಂದು ತಿಳಿಸಿದರು.

Shamanur Shivashankarappa Tips

Shamanur Shivashankarappa Talk

Shamanur Shivashankarappa is Davanagere

Shamanur Shivashankarappa is upset,

Shamanur Shivashankarappa Speach

ಶಾಮನೂರು ಶಿವಶಂಕರಪ್ಪರಿಂದ ಶಕ್ತಿ ಯೋಜನೆಗೆ ಚಾಲನೆ 

ಶಾಮನೂರು ಶಿವಶಂಕರಪ್ಪರಿಂದ ಸಲಹೆ 

ಶಾಮನೂರು ಶಿವಶಂಕರಪ್ಪರಿಂದ ಬಸ್ ಟಿಕೆಟ್ ವಿತರಣೆ 

ಶಾಮನೂರು ಶಿವಶಂಕರಪ್ಪ ಅಸಮಾಧಾನ

Exit mobile version