ದಾವಣಗೆರೆ: ದಾವಣಗೆರೆ ಧಣಿ, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರದ್ದು ರಾಜ್ಯ ರಾಜಕಾರಣದಲ್ಲಿ ಅಚ್ಚಳಿಯದೇ ಉಳಿದಿರುವ ಹೆಸರು. ಮಾತ್ರವಲ್ಲ, ಇಳಿವಯಸ್ಸಿನಲ್ಲಿ ಶಾಸಕರಾಗಿದ್ದು ಇತಿಹಾಸ. ಇಹಲೋಕ ತ್ಯಜಿಸಿದ ಶಾಮನೂರು ಶಿವಶಂಕರಪ್ಪರದ್ದು ಅಪರೂಪದ ವ್ಯಕ್ತಿತ್ವ. ರಾಜಕಾರಣದಲ್ಲಿ ಮುಟ್ಟಿದ್ದೆಲ್ಲ ಚಿನ್ನವೇ. ಯಾಕೆಂದರೆ ಶಾಮನೂರು ಶಿವಶಂಕರಪ್ಪರನ್ನು ವಿಧಾನಸಭೆ ಚುನಾವಣೆಯಲ್ಲಿ ಯಾರೂ ಸೋಲಿಸಿಲ್ಲ. ಇದೂ ಸಹ ಇತಿಹಾಸವೇ.
READ ALSO THIS STORY: ಬಾರದೂರಿಗೆ ಹೋದ ದಾವಣಗೆರೆ ಧಣಿ ಶಾಮನೂರು ಶಿವಶಂಕರಪ್ಪ
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಶಾಮನೂರು ಶಿವಶಂಕರಪ್ಪ ಅಚ್ಚಳಿಯದ ಹೆಸರು. ವಿಧಾನಸಭೆಗೆ ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲಿಯೂ ಸೋಲು ಕಾಣದ ಸರದಾರ ಎಂಬ ಕೀರ್ತಿ ಹೊಂದಿರುವ ಶಿವಶಂಕರಪ್ಪ ಅಂದುಕೊಂಡಿದ್ದನ್ನು ಸಾಧಿಸುವ ಛಲದಂಕಮಲ್ಲರು. ಒಂದು ಗುಟುರು ಹಾಕಿದರೆ ಸಾಕು, ರಾಜ್ಯ ರಾಜಕಾರಣದಲ್ಲಿ ಸುಂಟರಗಾಳಿಯೇ ಎದ್ದುಬಿಡುತ್ತೆ. ಮಾತು ಕಡಿಮೆ ಆಡಿದರೂ ತೂಕದ್ದೇ. ಇದು ಹಲವಾರು ಬಾರಿ ಸಾಬೀತು ಆಗಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾಗಿರುವ ಶಾಮನೂರು ಶಿವಶಂಕರಪ್ಪ ಅವರು ರಾಜ್ಯ ರಾಜಕಾರಣದ ಅತ್ಯಂತ ಹಿರಿಯ ಶಾಸಕರು. ಮುತ್ಸದ್ಧಿ ರಾಜಕಾರಣಿ.
ದಾವಣಗೆರೆ ಜನತೆಯ ಪಾಲಿನ ಧಣಿ. ಸೋಲರಿಯದ ಸರದಾರ ಎಂದೇ ಕರೆಯಲ್ಪಡುವ ಶಾಮನೂರು ಶಿವಶಂಕರಪ್ಪರು ಇಳಿವಯಸ್ಸಿನಲ್ಲಿಯೂ ಕನ್ನಡಕ ಧರಿಸದೇ ಪತ್ರಿಕೆ ಓದುತ್ತಾರೆ, ಅಂಗಡಿಗೆ ಹೋದರೆ ಬೇಳೆ, ಕಾಳು ಸೇರಿದಂತೆ ಎಲ್ಲವನ್ನೂ ಪರೀಕ್ಷಿಸುತ್ತಾರೆ. ಬದುಕೇ ಒಂದು ಆದರ್ಶ. ಜೀವನವೇ ಎಲ್ಲರಿಗೂ ಮಾದರಿ.
ದಾವಣಗೆರೆ ಇಷ್ಟೊಂದು ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗಲು ಕೊಟ್ಟಿರುವ ಕೊಡುಗೆ ಅಪಾರ. ದಾವಣಗೆರೆಯ ದಣಿವರಿಯದ ರಾಜಕಾರಣಿ ಎಂದರೆ ಅದು ಎಸ್. ಎಸ್. ಮಾತ್ರ. ರಾಜಕೀಯ ಅಷ್ಟೇ ಅಲ್ಲದೇ ಶಿಕ್ಷಣ ತಜ್ಞರು, ಕೈಗಾರಿಕೋದ್ಯಮಿಗಳು. ಶೈಕ್ಷಣಿಕ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಅಮೃತ ಪುರುಷ ಡಾ. ಶಾಮನೂರು ಶಿವಶಂಕರಪ್ಪ.
ರಾಜಕೀಯ ಹಿನ್ನೆಲೆ:
ಶಾಮನೂರು ಶಿವಶಂಕರಪ್ಪನವರು 1972ರಲ್ಲಿ ನಗರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ 2008, 2013, 2018, 2023ರಲ್ಲಿ ಒಟ್ಟು ನಾಲ್ಕು ಬಾರಿ ಎಂಎಲ್ ಎ ಚುನಾವಣೆಯಲ್ಲಿ ಜಯಗಳಿಸಿದ್ದು, 1998-1999ರ ಒಂದು ವರ್ಷದ ಅವಧಿಗೆ ಲೋಕಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದರು, 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿ ಜನಮನ್ನಣೆ ಪಡೆದವರು, ಮೂರು ದಶಕಗಳಿಂದ ಕೆಪಿಸಿಸಿ ಖಚಾಂಜಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಯೂ ಎಸ್. ಎಸ್. ಅವರದ್ದು.
- Shamanuru Shivashankarappa
- Shamanuru Shivashankarappa Death
- Shamanuru Shivashankarappa Death news
- Shamanuru Shivashankarappa Mla
- Shamanuru Shivashankarappa News
- Shamanuru Shivashankarappa News Updates
- ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ
- ಶಾಮನೂರು ಶಿವಶಂಕರಪ್ಪ ಅಜರಾಮರ
- ಶಾಮನೂರು ಶಿವಶಂಕರಪ್ಪ ಇನ್ನಿಲ್ಲ
- ಶಾಮನೂರು ಶಿವಶಂಕರಪ್ಪ ನೆನಪು ಮಾತ್ರ
- ಶಾಮನೂರು ಶಿವಶಂಕರಪ್ಪ ನ್ಯೂಸ್
- ಶಾಮನೂರು ಶಿವಶಂಕರಪ್ಪ ವಿಧಿವಶ





Leave a comment