Site icon Kannada News-suddikshana

75 ತುಂಬಿದರೂ ಮೋದಿಯವರೇ ಪ್ರಧಾನಿ, ಕೇಜ್ರಿವಾಲ್ ಹೇಳಿಕೆಗೆ ಶಾ ಸ್ಪಷ್ಟನೆ!

Union Home Minister Amit Shah addresses the 'Hindu Gaurav Divas' programme organized on the death anniversary of BJP leader Kalyan Singh, in Aligarh | PTI

ನವದೆಹಲಿ : 75 ದಾಟಿದವರು ಚುನಾವಣಾ ರಾಜಕಾರಣದಿಂದ ರಾಜಕೀಯ ಮುಖ್ಯವಾಹಿನಿಯಿಂದ ಹಿಂದೆ ಸರಿಯಬೇಕು ಎಂಬ ಬಿಜೆಪಿಯಲ್ಲಿನ ಅಲಿಖಿತ ನಿಯಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಅನ್ವಯಿಸುವುದಿಲ್ಲ.‌ ಎಪ್ಪತ್ತೈದು ದಾಟಿದ ಬಳಿಕವೂ ಮೋದಿಯವರೇ ಈ ದೇಶದ ಪ್ರಧಾನಿಯಾಗಿರುತ್ತಾರೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.

ಅಬಕಾರಿ ನೀತಿ ಅಕ್ರಮ ಪ್ರಕರಣ ಹಿನ್ನೆಲೆ ತಿಹಾರ್ ಜೈಲು ಪಾಲಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್, ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನಿನ ಮೇಲೆ ನಿನ್ನೆ ಹೊಬಂದ ಬೆನ್ನಲ್ಲೇ 2025 ಸೆ.17ಕ್ಕೆ ಪ್ರಧಾನಿ ಮೋದಿಗೆ ಎಪ್ಪತ್ತೈದು ವರ್ಷ ತುಂಬಲಿರುವುದರಿಂದ ಅವರು ನಿವೃತ್ತರಾಗಲಿದ್ದಾರೆ ಎಂದಿದ್ದರು. ಅಷ್ಟೇಯಲ್ಲ, ನರೇಂದ್ರ ಮೋದಿಯವರ ಬಳಿಕ ಇದೇ ಅಮಿತ್ ಶಾ ಅವರು ಪ್ರಧಾನಿಯಾಗೋದು ಅಂತಾ ಬಾಂಬ್ ಸಿಡಿಸಿದ್ದರು. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನಿವೃತ್ತಿಯ ಕುರಿತು ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಅವರು ನೀಡಿದ ಹೇಳಿಕೆ ಮತದಾರರ ಮೇಲೆ ಪರಿಣಾಮವನ್ನು ಉಂಟು ಮಾಡಬಹುದಾದೆಂದು ಭಾವಿಸಿದ ಕೇಂದ್ರ ಸಚಿವ ಅಮಿತ್ ಶಾ, ತಡಮಾಡದೇ ಪ್ರತಿಕ್ರಿಯಿಸಿದ್ದು, ಸಂಚಲನ ಉಂಟು ಮಾಡಿದೆ. ಎಪ್ಪತ್ತೈದು ದಾಟಿದವರು ಅಧಿಕಾರದಿಂದ ಹಿಂದೆ ಸರಿಯಬೇಕು ಎಂಬ ಬಿಜೆಪಿ ಪಕ್ಷದ ಆಂತರಿಕ ಮತ್ತು ಅಘೋಷಿತ ನಿಯಮದಲ್ಲಿ ಇದೀಗ ಸಡಿಲಿಕೆ ಮಾಡಲಾಗಿದ್ದು, ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನ್ವಯಿಸುವುದಿಲ್ಲ ಎಂದೂ ಸಚಿವ ಶಾ ಹೇಳಿದ್ದಾರೆ.‌ ಹಾಗೆ ನೋಡಿದರೆ, ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪನಬರಿಗೆ ಎಪ್ಪತ್ತೈದು ದಾಟಿದ್ದರೂ ಕೂಡ 2020 ರಲ್ಲಿ ಸಿಎಂ ಆಗಿದ್ದರು. ಇನ್ನು ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿರುವ ರಾಜನಾಥ ಸಿಂಗ್ ಅವರಿಗೆ ಎಪ್ಪತ್ತೈದು ದಾಟಿದ್ದರೂ ಕೂಡ ಈಗಲೂ ಅವರು ಸಚಿವರಾಗಿ ಮುಂದುವರಿದಿಲ್ಲವೆ? ಕೆಲವರಿಗೆ ಎಪ್ಪತ್ತೈದರ ನಿಯಮ ಅನ್ವಯಿಸುವುದಿಲ್ಲ. ಈ ಮಾತಿಗೆ ಪ್ರಧಾನಿಯವರೂ ಹೊರತಾಗಿಲ್ಲವೆಂದು ಅಮಿತ್ ಹೇಳಿದ್ದು, ಬಿಜೆಪಿಯಲ್ಲಿ ಚರ್ಚಗೆ ಗ್ರಾಸವಾಗಿದೆ

Exit mobile version