Home ದಾವಣಗೆರೆ ನಾಮನಿರ್ದೇಶಕರ ಸದಸ್ಯರುಗಳ ಆಯ್ಕೆಗೆ ಅರ್ಜಿ ಆಹ್ವಾನ
ದಾವಣಗೆರೆಬೆಂಗಳೂರು

ನಾಮನಿರ್ದೇಶಕರ ಸದಸ್ಯರುಗಳ ಆಯ್ಕೆಗೆ ಅರ್ಜಿ ಆಹ್ವಾನ

Share
Share

SUDDIKSHANA KANNADA NEWS/DAVANAGERE/DATE:28_11_2025

ದಾವಣಗೆರೆ: ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮ ದಾವಣಗೆರೆ ಇಲ್ಲಿಗೆ ನಾಮನಿರ್ದೇಶಕ ಸದಸ್ಯರುಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ದಾವಣಗೆರೆ ಇದ್ದ ಜಿಲ್ಲಾ ಮಟ್ಟದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅನುಷ್ಠಾನ ಸಮಿತಿಗೆ 3 ಜನರನ್ನು ನಾಮನಿರ್ದೇಶನ ಮಾಡಲು ಮೇದಾ, ಮೇದಾರಿ. ಗೌರಿಗೆ, ಬುರುಡ, ಮೇದಾರ ಬುಡಕಟ್ಟು ಸಮುದಾಯದ ಬಗ್ಗೆ ಮಾಹಿತಿ ಹೊಂದಿರುವ ಹಾಗೂ ಸೇವೆ ಮಾಡುವ ಸೇವಾ
ಮನೋಭಾವ ಹೊಂದಿರುವ ಜನರನ್ನು ಆಯ್ಕೆ ಮಾಡಲಾಗುವುದು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, 2ನೇ ಮಹಡಿ ಕೊಠಡಿ ಸಂಖ್ಯೆ.45, ಜಿಲ್ಲಾಡಳಿತ ಭವನ ದಾವಣಗೆರೆ ಇಲ್ಲಿ ಅರ್ಜಿಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಡಿಸೆಂಬರ್ 3 ರೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *