Site icon Kannada News-suddikshana

ರಾಷ್ಟ್ರಮಟ್ಟದ ಬಾಸ್ಕೆಟ್ ಬಾಲ್ ತಂಡಕ್ಕೆ ದಾವಣಗೆರೆಯ ಕೌಶಿಕ್ ಎ. ಟಿ. ಆಯ್ಕೆ

SUDDIKSHANA KANNADA NEWS/ DAVANAGERE/ DATE:21-11-2024

ದಾವಣಗೆರೆ: ಬಾಸ್ಕೆಟ್ ಬಾಲ್ ಕ್ಲಬ್ ನ ಆಟಗಾರ ಕೌಶಿಕ್ ಎ. ಟಿ. ಅವರು ರಾಷ್ಟ್ರಮಟ್ಟದ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾನೆ.

ನವೆಂಬರ್ 21ರಿಂದ 26ರವರೆಗೆ 68ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ 2024-25 ಪಟಿಯಾಲ ಪಂಜಾಬ್ ನಲ್ಲಿ ನಡೆಯಲಿದ್ದು, ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ನ ಆಟಗಾರನಾಗಿರುವ ಎ. ಟಿ. ಕೌಶಿಕ್ ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾಗಿದ್ದು, ಅರುಣ್ ಟಿ. ಎಂ. ಹಾಗೂ ರೇಖಾ ಎ. ಟಿ. ದಂಪತಿ ಪುತ್ರ.

ಕೌಶಿಕ್ ಗೆ ಕ್ಲಬ್ ನ ಗೌರವ ಅಧ್ಯಕ್ಷ ರಾಮಮೂರ್ತಿ ಸಿ, ಅಧ್ಯಕ್ಷ ಆರ್. ಕಿರಣ್ ಕುಮಾರ್, ಉಪಾಧ್ಯಕ್ಷ ಗಡಿಗುಡಾಳ್ ಮಂಜುನಾಥ್, ವಿಜಯ್ ಕುಮಾರ್, ಕಾರ್ಯದರ್ಶಿ ವೀರೇಶ್ ಆರ್, ಸಹ ಕಾರ್ಯದರ್ಶಿ ಉದಯ್ ಸ್ವಾಮಿ, ಖಜಾಂಚಿ ಪ್ರಸನ್ನ ಕುಮಾರ್, ತರಬೇತುದಾರ ದರ್ಶನ್ ಆರ್. ಹಾಗೂ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ನ ಎಲ್ಲಾ ಸದಸ್ಯರು ಅಭಿನಂದಿಸಿದ್ದು, ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸಿದ್ದಾರೆ.

Exit mobile version