ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲು ಅಭ್ಯರ್ಥಿ ಕಣಕ್ಕಿಳಿಸುವಂತೆ ಒತ್ತಡ ಜಾಸ್ತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಅದೇ ರೀತಿಯಲ್ಲಿ ರಾಜ್ಯ ಘಟಕಕ್ಕೆ ಜಿಲ್ಲಾ ಘಟಕವು ಅಭ್ಯರ್ಥಿ ಕಣಕ್ಕಿಳಿಸಬೇಕೆಂಬ ಸಲಹೆಯನ್ನು ನೀಡಿದೆ ಎಂದು ಜಿಲ್ಲಾಧ್ಯಕ್ಷ ಎ. ಆರ್. ತಾಹೀರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ಜಾಗೃತರಾಗಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರು ಬೆಂಬಲಿಸಬಹುದು. ಟಿಕೆಟ್ ಅನ್ನೂ ಕೇಳುತ್ತಿದ್ದಾರೆ. ಅದು ಅವರ ಹಕ್ಕು. ಅಲ್ಪಸಂಖ್ಯಾತರ ನೋವು ಈ ಚುನಾವಣೆಯಲ್ಲಿ ಭುಗಿಲೇಳುತ್ತೆ. ಪರ್ಯಾಯ ರಾಜಕಾರಣಕ್ಕೆ ಹೊಸ ಮುನ್ನುಡಿ ಹಾಕುತ್ತೇವೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಎಸ್ ಡಿಪಿಐ ಕಾರ್ಯತಂತ್ರ, ಸಂಘಟನಾ ಬಲವರ್ಧನೆ ಹಾಗೂ ಪರ್ಯಾಯ ರಾಜಕೀಯದ ಅಗತ್ಯತೆಯ ಕುರಿತು ಸಹ ಬಹಳ ಗಂಭೀರವಾಗಿ ಮತ್ತು ಸೂಕ್ಷ್ಮವಾಗಿ ಚರ್ಚೆ ನಡೆಸಲಿದ್ದು, ಆ ಬಳಿಕ ಅಂತಿಮ ನಿರ್ಧಾರ ಘೋಷಿಸಲಾಗುವುದು ಎಂದು ಹೇಳಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ಸೇರಿದಂತೆ ಜಿಲ್ಲಾ ನಾಯಕರು, ತಾಲೂಕು ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಪಕ್ಷದ ಹಿತೈಷಿಗಳು ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿ
ಅಂತಿಮ ನಿರ್ಧಾರಕ್ಕೆ ಬರುತ್ತೇವೆ ಎಂದರು.
SIR ವಿಚಾರದಲ್ಲಿ ಮಮತಾ ಬ್ಯಾನರ್ಜಿಯ ಧೈರ್ಯ ಸಿದ್ದರಾಮಯ್ಯಗೆ ಪಾಠ!
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಪ್ರಾಥಮಿಕ ಹಂತದಲ್ಲಿ ನಡೆಯುತ್ತಿರುವ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ಲೋಪದೋಷಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು. ಈ ಪ್ರಕ್ರಿಯೆ ಹೇಗೆ ಬಡವರು, ಅಲ್ಪಸಂಖ್ಯಾತರು, ವಲಸಿಗ ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಮತದಾನದ ಹಕ್ಕನ್ನು ಕಸಿದು ಕೊಳ್ಳುವ ಸಂಚು ರೂಪಿಸಲಾಗಿದೆ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಎಸ್ ಡಿಪಿಐ ಹೊಂದಿದೆ. ಈ ಕರಾಳ ಪ್ರಕ್ರಿಯೆ ಎನ್ ಆರ್ ಸಿಯ ಹಿಂಬಾಗಿಲು. ದೇಶದಾದ್ಯಂತ ಈ ಪ್ರಕ್ರಿಯೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದರೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮೌನ
ವಹಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಸ್ಐಆರ್ ನ ಅಪಾಯಗಳನ್ನು ಧೈರ್ಯವಾಗಿ ಪ್ರಶ್ನಿಸಿ ಮತದಾರರ ಹಕ್ಕುಗಳ ರಕ್ಷಣೆಗೆ ತಮ್ಮ ಸ್ಪಷ್ಟ ನಿಲುವು ತಳೆದಿರುವುದನ್ನು ಉದಾಹರಣೆಯಾಗಿ ತೆಗೆದುಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದರಿಂದ ಪಾಠ ಕಲಿಯುವರೇ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಶೀಘ್ರದಲ್ಲೇ ಎಸ್ಐಆರ್ ಆರಂಭವಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಸಭೆಯಲ್ಲಿ ಎಸ್ಐಆರ್ ನ ಕಾನೂನಾತ್ಮಕ, ರಾಜಕೀಯ ಹಾಗೂ ಸಾಮಾಜಿಕ ದುಷ್ಪರಿಣಾಮಗಳು, ರಾಜಕೀಯ ದುರುದ್ದೇಶಗಳು ಯಾವ ರೀತಿ ಪರಿಣಾಮ ಬೀರಲಿದೆ ಮತ್ತು ಜನಪರ ನಿಲುವು ರೂಪಿಸುವ ಬಗ್ಗೆ ಸವಿಸ್ತಾರ ಚರ್ಚೆ ನಡೆಸಿ ಮುಂದೆ ನಿರ್ಧರಿಸುತ್ತೇವೆ ಎಂದರು.
ಜನಪರ ಆಡಳಿತದಲ್ಲಿ ವಿಫಲವಾಗುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸುವ ಬಗ್ಗೆಯೂ ಚರ್ಚೆಯಾಗಲಿದ್ದು ಈ ಒಂದು ಸಭೆಯೂ ದಾವಣಗೆರೆಯ ರಾಜಕೀಯ ದಿಕ್ಕೂಚಿಯನ್ನೇ ಬದಲಾಯಿಸಲಿದೆ ಎಂದು ವಿಶ್ಲೇಷಿಸಿದರು.
ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯರಾದ ಫಯಾಜ್ ಅಹಮದ್, ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ರಜೈ ರಿಯಾಝ್ ಅಹಮದ್, ಜಿಲ್ಲಾ ಸಮಿತಿ ಸದಸ್ಯರಾದ ಇಸ್ಮಾಯೀಲ್ ಝಬಿವುಲ್ಲಾ, ಮತ್ತು ಜಿಲ್ಲಾ ಕೋಶಾಧಿಕಾರಿ ಹಾಗೂ ಮಾಧ್ಯಮ ಉಸ್ತುವಾರಿಯಾದ ಮೊಹಮ್ಮದ್ ಅಜರುದ್ದೀನ್ ರವರು ಉಪಸ್ಥಿತರಿದ್ದರು.
- A.R. Tahir
- Alternative Politics
- Davanagere South Byelection
- Karnataka Politics Updates.
- Minority Votes Karnataka
- SDPI Candidate Davanagere
- SDPI vs Congress
- Shamanur Shivashankarappa
- Siddaramaiah vs Mamata Banerjee
- SIR Voter Mapping
- ಅಲ್ಪಸಂಖ್ಯಾತ ಮತದಾರರು
- ಎ.ಆರ್. ತಾಹೀರ್
- ಎಸ್ಐಆರ್ ವಿವಾದ
- ಎಸ್ಡಿಪಿಐ ಸ್ಪರ್ಧೆ
- ಕರ್ನಾಟಕ ಉಪಚುನಾವಣೆ 2026
- ಕಾಂಗ್ರೆಸ್ಗೆ ಪಾಠ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಪರ್ಯಾಯ ರಾಜಕಾರಣ
- ಶಾಮನೂರು ಶಿವಶಂಕರಪ್ಪ ನಿಧನ
- ಸಿದ್ದರಾಮಯ್ಯ ಮೌನ





Leave a comment