Site icon Kannada News-suddikshana

ಇನ್ಫೋಸಿಸ್ ವತಿಯಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ 1,00,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ

(IF Scholarship) ಪದವಿಪೂರ್ವ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ಇನ್ಫೋಸಿಸ್ ಫೌಂಡೇಶನ್ ಸ್ಟೆಮ್ ಸ್ಟಾರ್ಸ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ವಿಷಯಗಳಲ್ಲಿ ಪದವಿಪೂರ್ವ ಪದವಿಗಳನ್ನು ಅಭ್ಯಾಸ ಮಾಡುವ ಇಚ್ಚೆಯಿರುವಂತಹ ಭಾರತದಲ್ಲಿನ ವಿದ್ಯಾರ್ಥಿನಿಯರನ್ನು ಬೆಂಬಲಿಸಲು ಇನ್ಫೋಸಿಸ್ ಫೌಂಡೇಶನ್ನ ಉಪಕ್ರಮವಾಗಿದೆ.

ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?:
* ಭಾರತದ ಪ್ರಜೆಗಳಾಗಿರುವ ಮತ್ತು ಎಂಜಿನಿಯರಿಂಗ್, ಮೆಡಿಸಿನ್ (ಎಂಬಿಬಿಎಸ್) ಮತ್ತು ಇತರ ಸಂಬAಧಿತ ಸ್ಟೆಮ್ ವಿಷಯಗಳ ಕ್ಷೇತ್ರಗಳಲ್ಲಿ ಇನ್ಸ್ಟಿಟ್ಯೂಟ್ ಆಫ್ ರೆಪ್ಯೂಟ್ (ಎನ್ಐಆರ್ಎಫ್ ಮಾನ್ಯತೆ ಪಡೆದ)ನಲ್ಲಿ ತಮ್ಮ 4-ವರ್ಷದ ಪದವಿಪೂರ್ವ ಕೋರ್ಸ್ನ ಮೊದಲನೆ ವರ್ಷಕ್ಕೆ ದಾಖಲಾಗಿರುವ ವಿದ್ಯಾರ್ಥಿನಿಯರು ಅರ್ಹರು.
* ಹೀಗೆ ಗುರುತಿಸಲ್ಪಟ್ಟ ಕಾಲೇಜುಗಳಲ್ಲಿ ಅರ್ಜಿದಾರರು ಪ್ರವೇಶ ಪಡೆದಿರಬೇಕು ಮತ್ತು ತಮ್ಮ 12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ರೂ.8 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
* ಅರ್ಜಿದಾರರು ಅದೇ ವೆಚ್ಚಗಳಿಗಾಗಿ ಇತರ ವಿದ್ಯಾರ್ಥಿವೇತನಗಳನ್ನು ಪಡೆದುಕೊಂಡಿರಬಾರದು.

ಆಯ್ಕೆಯಾದ ಅಭ್ಯರ್ಥಿಗಳು ಬೋಧನೆ, ಜೀವನ ನಿರ್ವಹಣಾ ವೆಚ್ಚಗಳು ಮತ್ತು ಅಧಯನ ಸಾಮಗ್ರಿಗಳನ್ನು ಒಳಗೊಂಡಂತೆ, ತಾವು ಪಾವತಿಸಿರುವ ರಸೀದಿಗೆ ತಕ್ಕಂತೆ ವಾರ್ಷಿಕ ರೂ.1 ಲಕ್ಷದ ವರೆಗೆ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/ISTS2 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
15-09-2024

Exit mobile version