Site icon Kannada News-suddikshana

9 ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 1,000 ಸ್ಕಾಲರ್ ಶಿಪ್, ಸಂಪೂರ್ಣ ಮಾಹಿತಿ ಇಲ್ಲಿದೆ

(JM Scholarship) ಜೆಎಂ ಸೇಥಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ 9 ನೇ ತರಗತಿ ವಿದ್ಯಾರ್ಥಿ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುತ್ತಿದ್ದು, ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಜೆಎಂ ಸೇಥಿಯಾ ಮೆರಿಟ್ ಸ್ಕಾಲರ್ಶಿಪ್ ಸ್ಕೀಮ್, 9 ರಿಂದ 12ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸ್ ಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗಾಗಿ ನೀಡುವ ಅವಕಾಶವಾಗಿದೆ. ವಿದ್ಯಾಭ್ಯಾಸದ ವಿವಿಧ ಹಂತಗಳಲ್ಲಿರುವ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಗುರಿಯನ್ನು ಮುಂದುವರಿಸಲು ಬೆಂಬಲ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು ಎಂಬುದು ಈ ಕೆಳಗೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
* 9ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಪದವಿಗಳಿಗೆ ಪೂರ್ಣ ಪ್ರಮಾಣದಲ್ಲಿ ದಾಖಲಾಗಿರುವಂತಹ ವಿದ್ಯಾರ್ಥಿಗಳಿಗೆ ಲಭ್ಯವಿದೆ.
* ಅರ್ಜಿದಾರರು ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ನಿರ್ದಿಷ್ಟಪಡಿಸಲಾದ ಕನಿಷ್ಠ ಒಟ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
* ಕೋರ್ಸ್ ವಿಭಾಗಗಳು ಮತ್ತು ಸ್ಟ್ರೀಮ್ಗಳನ್ನು ಅವಲಂಬಿಸಿ ಈ ಅಂಕಗಳ ಅವಶ್ಯಕತೆ ಬದಲಾಗುತ್ತದೆ.

ಎಷ್ಟು ಸ್ಕಾಲರ್ ಶಿಪ್ ಲಭ್ಯ:
ತಿಂಗಳಿಗೆ 1,000 ದ ವರೆಗೆ

(JM Scholarship) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
31-07-2024

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಯೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸುವುದು.

ಅಂಚೆಯ ಮೂಲಕ: ಜೆಎಂ ಸೇಥಿಯಾ ಚಾರಿಟೇಬಲ್ ಟ್ರಸ್ಟ್, 133, ಬಿಪ್ಲಬಿ ರಾಶ್ ಬಿಹಾರಿ ಬಸು ರೋಡ್, 3ನೇ ಫ್ಲೋರ್, ರೂಂ.ನಂ. 15, ಕೋಲ್ಕತ್ತಾ- 700001. ಅಥವಾ ಗಾಂಧಿ ಹೌಸ್, 5ನೇ ಫ್ಲೋರ್, 16, ಗಣೇಶ್ ಚಂದ್ರ ಅವೆನ್ಯೂ, ಕೋಲ್ಕತ್ತಾ- 700013 ಇ-ಮೇಲ್ ಐಡಿ: jms_trust@yahoo.in ಮೊಬೈಲ್ ನಂ. (+91)-933979

Exit mobile version