Site icon Kannada News-suddikshana

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

(AI Scholarships:) ಸ್ಟೆಮ್ ಕೋರ್ಸ್ಗಳಲ್ಲಿ ಯಾವುದೇ ವರ್ಷದಲ್ಲಿ ವೃತ್ತಿಪರ ಗ್ರಾಜುಯೇಷನ್ ಓದುತ್ತಿರುವ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ಆಲ್ಸ್ಟಮ್ ಇಂಡಿಯಾ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ಇದನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಆಲ್ಸ್ಟಮ್ ಇಂಡಿಯಾವು ಭಾರತದಾದ್ಯಂತದ ವಿದ್ಯಾರ್ಥಿಗಳಿಗೆ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸಲು ಮತ್ತು ಕಾಲೇಜು ಶಿಕ್ಷಣವನ್ನು ತೊರೆಯದಂತೆ ತಡೆಯಲು ಆರ್ಥಿಕ ಬೆಂಬಲವನ್ನು ಒದಗಿಸಲು ಈ ವಿದ್ಯಾರ್ಥಿವೇತನವನ್ನು ಒದಗಿಸುತ್ತಿದೆ.

ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
• ಸ್ಟೆಮ್ ಕೋರ್ಸ್ಗಳಲ್ಲಿ ಯಾವುದೇ ವರ್ಷದಲ್ಲಿ ವೃತ್ತಿಪರ ಗ್ರಾಜುಯೇಷನ್ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
• ಅಭ್ಯರ್ಥಿಗಳು ತಮ್ಮ ಈ ಹಿಂದಿನ ಶೈಕ್ಷಣಿಕ ವರ್ಷ / ಸೆಮಿಸ್ಟರ್ನಲ್ಲಿ ಕನಿಷ್ಟ 60% ಅಂಕಗಳನ್ನು ಗಳಿಸಿರಬೇಕು.
• ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ರೂ.6,00,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.
• ವಿದ್ಯಾರ್ಥಿವೇತನವು ಚೆನ್ನೈ (ತಮಿಳುನಾಡು), ಕೊಯಮತ್ತೂರು (ತಮಿಳುನಾಡು), ಕೋಲ್ಕತ್ತಾ (ಪಶ್ಚಿಮ ಬಂಗಾಳ), ಮಾಧೇಪುರ (ಬಿಹಾರ), ಶ್ರೀ ಸಿಟಿ (ಆಂಧ್ರ ಪ್ರದೇಶ) ಅಥವಾ ವಡೋದರಾ (ಗುಜರಾತ್) ಪ್ರದೇಶದ ನಿವಾಸಿಗಳಾಗಿರುವ ವಿದ್ಯಾರ್ಥಿಗಳಿಗೆ ಲಭ್ಯವಿದೆ.

ಎಷ್ಟು ಸ್ಕಾಲರ್ ಶಿಪ್ ಲಭ್ಯ?;
ರೂ. 75,000ದ ವರೆಗೆ (ಒಂದು-ಬಾರಿ)

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/AISDG7 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
30-09-2024

Exit mobile version