Site icon Kannada News-suddikshana

ದ್ವಿತೀಯ ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್

(EmpowerHER Scholarship) ದ್ವಿತೀಯ ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ 2024- 25 ನೇ ಸಾಲಿನ ಎಂಪವರ್ ಹರ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಎಂಪವರ್ ಹರ್ ಸ್ಕಾಲರ್ಶಿಪ್ 2024-2025, ಭಾರತದಲ್ಲಿಯ ಮಹಿಳೆಯರಿಗಾಗಿ 100% ಟೆಕ್ ಸ್ಕಾಲರ್ಶಿಪ್ ಆಗಿದ್ದು, ಕೆಎಸ್ಐಎಫ್ (ಕೊರಿಯಾ ಸೋಷಿಯಲ್ ಇನ್ನೊವೇಶನ್ ಫಂಡ್)ನ ಸಹಯೋಗವನ್ನು ಹೊಂದಿದೆ ಮತ್ತು ಎವಿಪಿಎನ್ನಿಂದ ನಡೆಸಲ್ಪಡುತ್ತಿದೆ. ಯಾವುದೇ ಸ್ಟ್ರೀಮ್ನಲ್ಲಿ 12ನೇ ತರಗತಿ, ಡಿಪ್ಲೊಮಾ ಅಥವಾ ಪದವಿಯನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿವೇತನವು ಮುಕ್ತವಾಗಿದೆ.

ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
ಬಿಬಿಎ, ಬಿಎ, ಬಿಟೆಕ್ (ಎಲ್ಲಾ ವಿಭಾಗಗಳು), ಬಿಕಾಂ ಮತ್ತು ಬಿಎಸ್ಸಿ ಪದವಿ ಕಾರ್ಯಕ್ರಮ ಸೇರಿದಂತೆ ಆದರೆ ಸೀಮಿತವಾಗಿರದೆ ಯಾವುದೇ ಕ್ಷೇತ್ರದಲ್ಲಿ 12ನೇ ತರಗತಿ, ಡಿಪ್ಲೊಮಾ ಅಥವಾ ಪದವಿಯನ್ನು ಪೂರ್ಣಗೊಳಿಸಿರುವ 18ರಿಂದ 30 ವರ್ಷ ವಯಸ್ಸಿನೊಳಗಿನ ಭಾರತೀಯ ಮಹಿಳೆಯರಿಗೆ ಮುಕ್ತವಾಗಿದೆ.

ಅರ್ಜಿದಾರರು ಆರಂಭಿಕ ಇಂಗ್ಲಿಷ್ ಪ್ರಾವೀಣ್ಯತೆಯನ್ನು ಹೊಂದಿರಬೇಕು ಮತ್ತು ಖಾತರಿಯಾದ ಇಂಟರ್ನೆಟ್ ಸಂಪರ್ಕದೊಂದಿಗೆ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಕಂಪ್ಯೂಟರ್ ಅನ್ನು ಹೊಂದಿರಬೇಕು.

ಎಷ್ಟು ಸ್ಕಾಲರ್ ಶಿಪ್ ಲಭ್ಯ?:
ನೀಡಿರುವ ಕೋರ್ಸ್ಗಳಿಗೆ 100% ಟೆಕ್ ಸ್ಕಾಲರ್ಶಿಪ್ ಮತ್ತು 3-ತಿಂಗಳ ಪೇಯ್ಡ್ ಇಂಟರ್ನ್ಶಿಪ್* (*ಷರತ್ತು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ).

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/EMPW1 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?;
30-09-2024

Exit mobile version