Site icon Kannada News-suddikshana

8ನೇ ತರಗತಿಯಿಂದ ಪದವಿವರೆಗೆ ವಿದ್ಯಾರ್ಥಿಗಳಿಗೆ ಸಿಗಲಿದೆ 46,305 ಸ್ಕಾಲರ್ ಶಿಪ್: ಕೂಡಲೇ ಅರ್ಜಿ ಸಲ್ಲಿಸಿ

(IGCP Scholarship) 8ನೇ ತರಗತಿಯಿಂದ ಪದವಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ 2024- 25 ನೇ ಸಾಲಿನ ಇನ್ಟ್ಯೂಇಟ್ ರೈಸ್ ಗರ್ಲ್ ಚೈಲ್ಡ್ ಎಜುಕೇಶನ್ ಪ್ರೋಗ್ರಾಂ ಸ್ಕಾಲರ್ ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಸಮಗ್ರ ಶೈಕ್ಷಣಿಕ ಬೆಂಬಲವನ್ನು ಒದಗಿಸುವ ಮೂಲಕ 8ನೇ ತರಗತಿಯಿಂದ ಪದವಿಯವರೆಗಿನ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರನ್ನು ಸಬಲೀಕರಣಗೊಳಿಸಲು ಇನ್ಟ್ಯೂಇಟ್ ಇಂಡಿಯಾವು ಮುಡಿಪಾಗಿದೆ. ಈ ಬೆಂಬಲವು ವಿದ್ಯಾರ್ಥಿನಿಯರಿಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಸಹಾಯ ಮಾಡುವ ಜೊತೆಗೆ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ.

ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;

  • 8ನೇ ತರಗತಿಯಿಂದ ಪದವಿಯವರೆಗಿನ ವಿದ್ಯಾರ್ಥಿನಿಯರು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.
  •  ಅರ್ಹತೆಯನ್ನು ಗಳಿಸಲು ಅರ್ಜಿದಾರರು ತಮ್ಮ ಈ ಮೊದಲ ಶೈಕ್ಷಣಿಕ ವರ್ಷದಲ್ಲಿ 60%ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರೇಕು.
  •  ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ.3.5 ಲಕ್ಷಕ್ಕಿಂತ ಕಡಿಮೆ ಇರಬೇಕು.
  •  ಇನ್ಟ್ಯೂಇಟ್ ಇಂಡಿಯಾ ಮತ್ತು ಬಡ್ಡಿ4ಸ್ಟಡೀಯ ಉದ್ಯೋಗಿಗಳ ಮಕ್ಕಳು ಅರ್ಹರಾಗಿರುವುದಿಲ್ಲ.ಎಷ್ಟು ಸ್ಕಾಲರ್ ಶಿಪ್ ಲಭ್ಯ:
    46,305ಅರ್ಜಿ ಸಲ್ಲಿಕೆ ಹೇಗೆ?;
    ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/IRGC3 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
    30-09-2024

Exit mobile version