Site icon Kannada News-suddikshana

ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ನಲ್ಲಿ ಸಸಿ ನೆಡುವ ಕಾರ್ಯಕ್ರಮ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಗಡಿಗುಡಾಳ್ ಮಂಜುನಾಥ್

ದಾವಣಗೆರೆ

SUDDIKSHANA KANNADA NEWS/ DAVANAGERE/DATE:21_09_2025

ದಾವಣಗೆರೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ 58ನೇ ಜನುಮದಿನದ ಪ್ರಯುಕ್ತ ಮಹಾನಗರ ಪಾಲಿಕೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಗಡಿಗುಡಾಳ್ ಮಂಜುನಾಥ್ ಅವರ ನೇತೃತ್ವದಲ್ಲಿ ಎಂಸಿಸಿ ಬಿ ಬ್ಲಾಕ್ ನ ವಿವಿಧೆಡೆ ಸಸಿ ನೆಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.

READ ALSO THIS STORY: ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: 13 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮವೆಂದ್ರು ಎಸ್. ಮಧು ಬಂಗಾರಪ್ಪ

ಈ ವೇಳೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್ ಅವರು, ದಾವಣಗೆರೆ ನಗರ ಹಸಿರೀಕರಣಕ್ಕೆ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮತ್ತು ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಪ್ರಭಾ ಮಲ್ಲಿಕಾರ್ಜುನ್ ಅವರಂತೂ ವಿಶೇಷ ಕಾಳಜಿ ವಹಿಸಿ ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಹೊಂದಿದ್ದು, ಈ ನಿಟ್ಟಿನಲ್ಲಿ ಈ ಹಿಂದೆಯೂ ಶ್ರಮ ವಹಿಸಿದ್ದರು ಎಂದು ತಿಳಿಸಿದರು.

ದಾವಣಗೆರೆ ಸ್ಮಾರ್ಟ್ ಸಿಟಿ ಆದರೂ ಮಲ್ಲಿಕಾರ್ಜುನ್ ಅವರ ವಿಶೇಷ ಪ್ರಯತ್ನದಿಂದ ಹಲವು ದೊಡ್ಡದಾದ ಮರಗಳು, ಗಿಡಗಳು ಉಳಿದಿವೆ. ಪಿ. ಬಿ. ರಸ್ತೆ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಮಹಾನಗರ ಪಾಲಿಕೆಯಿಂದಲೂ ಈ ಕಾರ್ಯ ನಡೆಯುತ್ತಿದೆ. ಮಾಲಿನ್ಯ ಮುಕ್ತ ನಗರವನ್ನಾಗಿಸಲು ವಿಶೇಷ ಕಾಳಜಿ ವಹಿಸಿದ್ದು, ಪರಿಸರ ಸಂರಕ್ಷಣೆಗೂ ಹೆಚ್ಚಿನ ಗಮನ ನೀಡಿರುವ ಸಚಿವರು ಇನ್ನೂ ಹೆಚ್ಚಿನ ಅನುದಾನ
ಈ ಕಾರ್ಯಕ್ಕೆ ಮುಂಬರುವ ದಿನಗಳಲ್ಲಿ ತರಲಿದ್ದಾರೆ ಎಂದು ಹೇಳಿದರು.

ಎಂಸಿಸಿ ಬಿ ಬ್ಲಾಕ್ ನ ನಾಗರಿಕರು, ಜನರು, ಹಿರಿಯರು, ಮಹಿಳೆಯರು ಸಿಸಿ ನೆಡುವ ಕಾರ್ಯಕ್ಕೆ ಉತ್ತಮ ಸ್ಪಂದನೆ ತೋರಿದ್ದಾರೆ. ಗಿಡಗಳನ್ನು ನೆಟ್ಟ ಬಳಿಕ ಪೋಷಿಸುವುದಾಗಿಯೂ ಭರವಸೆ ನೀಡಿದ್ದಾರೆ. ಮಲ್ಲಿಕಾರ್ಜುನ್ ಅವರ ಜನುಮದಿನದ ಪ್ರಯುಕ್ತ ನೂರಾರು ಗಿಡಗಳನ್ನು ವಿವಿಧೆಡೆ ನೆಡಲಾಗಿದೆ. ಮುಂದಿನ ವರ್ಷದ ಹೊತ್ತಿಗೆ ಈ ಗಿಡಗಳ ದೊಡ್ಡದಾಗಲಿವೆ. ಜನರಿಗೆ ಒಳ್ಳೆಯ ಗಾಳಿ ಸಿಗುವಂತಾಗಬೇಕಾದರೆ ಪರಿಸರ ಸಂರಕ್ಷಣೆ ಮಾಡಲೇಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗೋಣ ಎಂದು ಮನವಿ ಮಾಡಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದರಲ್ಲಿಯೂ ಮಲ್ಲಣ್ಣರ ಹುಟ್ಟುಹಬ್ಬದ ಪ್ರಯುಕ್ತ ಗಿಡಗಳನ್ನು ನೆಡುತ್ತಿರುವುದು ನಮಗೆ ಸಂತಸ ತಂದಿದೆ. ಮತ್ತಷ್ಟು ಗಿಡಗಳನ್ನು ವಾರ್ಡ್ ನಲ್ಲಿ ನೆಡುವ ಮೂಲಕ ಉತ್ತಮ ಪರಿಸರವುಳ್ಳ ವಾರ್ಡ್ ಆಗಿ ಪರಿವರ್ತಿಸಲಾಗುವುದು ಎಂದು ಗಡಿಗುಡಾಳ್ ಮಂಜುನಾಥ್ ಅವರು ಮಾಹಿತಿ ನೀಡಿದರು.

ಈ ವೇಳೆ ಎಂಸಿಸಿ ಬಿ ಬ್ಲಾಕ್ ನ ಮುಖಂಡರಾದ ಗುರುಮೂರ್ತಿ ಮಲ್ಲಿಕಾರ್ಜುನ ಸ್ವಾಮಿ ಬುಳ್ಳಾಪುರ, ಬೂದಿಹಾಳ್ ಬಾಬು, ಗುರುಮೂರ್ತಿ, ಪ್ರಶಾಂತ್, ಪ್ರಮೋದ್, ಮುರುಗೇಶ್ ಮಂತ್ರಿ, ಧರಣೇಂದ್ರ ಪ್ರಸಾದ್, ಭರತ್, ಸರೋಜಾ, ಯಶೋದ, ಹಾಜಿ ರುದ್ರೇಶ್ ಮತ್ತಿತರರು ಹಾಜರಿದ್ದರು.

Exit mobile version