Home ಕ್ರೈಂ ನ್ಯೂಸ್ ಕಾಕನೂರು ಗ್ರಾಮದ ಒಂಟಿ ಮನೆಯಲ್ಲಿ ವೃದ್ಧ ದಂಪತಿ ದರೋಡೆ: 5 ಅಂತಾರಾಜ್ಯ ದರೋಡೆಕೋರರ ಸೆರೆ, 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಕಾಕನೂರು ಗ್ರಾಮದ ಒಂಟಿ ಮನೆಯಲ್ಲಿ ವೃದ್ಧ ದಂಪತಿ ದರೋಡೆ: 5 ಅಂತಾರಾಜ್ಯ ದರೋಡೆಕೋರರ ಸೆರೆ, 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ!

Share
ದಂಪತಿ
Share

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕಾಕನೂರು ಗ್ರಾಮದ ಒಂಟಿ ಮನೆಯಲ್ಲಿ ವಾಸವಿದ್ದ ದಂಪತಿ ಕಟ್ಟಿ ಹಾಕಿ ದರೋಡೆ ಮಾಡಿದ್ದ ಪ್ರಕರಣವನ್ನು  ಭೇದಿಸುವಲ್ಲಿ ಸಂತೇಬೆನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಸತೀಶ್ ಕುಮಾರ್, ಕೇಶವನ್, ಅರುಣ್ ಪ್ರಶಾಂತ್, ಅರಸು ಮತ್ತು ಕಮಲಾದೇವಿ ಬಂಧಿತ ಆರೋಪಿಗಳು.

ಬಂಧಿತರಿಂದ ಸುಮಾರು 14 ಲಕ್ಷ ರೂಪಾಯಿ ಮೌಲ್ಯದ 96.1 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ಹಿನ್ನೆಲೆ:

ದಿನಾಂಕ 06-09-2025 ರಂದು ರಾತ್ರಿ ಚನ್ನಗಿರಿ-ದಾವಣಗೆರೆ ರಾಜ್ಯ ಹೆದ್ದಾರಿ-76ರ ಕಾಕನೂರು ಗ್ರಾಮದ ಹೊರವಲಯದ ಮನೆಯಲ್ಲಿ ವಾಸವಿದ್ದ ಸಾವಿತ್ರಮ್ಮ ಮತ್ತು ಮಾದಪ್ಪ ದಂಪತಿಗಳನ್ನು ಕಟ್ಟಿಹಾಕಿ, ಚಾಕುವಿನಿಂದ ಬೆದರಿಸಿ ದರೋಡೆ ಮಾಡಲಾಗಿತ್ತು.

ಮಾಂಗಲ್ಯ ಸರ, ಬಳೆ, ಕಿವಿಯೋಲೆ ಹಾಗೂ ಬೀರುವಿನಲ್ಲಿದ್ದ ಬೆಳ್ಳಿ-ಬಂಗಾರವನ್ನು ದೋಚಿಕೊಂಡು ದರೋಡೆಕೋರರು ಪರಾರಿಯಾಗಿದ್ದರು.

ಕಾರ್ಯಾಚರಣೆ ಮತ್ತು ಬಂಧನ:

ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಅವರ ನಿರ್ದೇಶನದಲ್ಲಿ ರಚನೆಯಾಗಿದ್ದ ವಿಶೇಷ ತಂಡವು, ತನಿಖೆಯ ಹಾದಿಯಲ್ಲಿ ತಮಿಳುನಾಡು ಮೂಲದ ಗ್ಯಾಂಗ್ ಬಗ್ಗೆ ಸುಳಿವು ಪತ್ತೆಹಚ್ಚಿತ್ತು. ಹುಳಿಯಾರು ಪೊಲೀಸರ ಸಹಕಾರದೊಂದಿಗೆ ಸತೀಶ್ ಕುಮಾರ್, ಕೇಶವನ್, ಅರುಣ್ ಪ್ರಶಾಂತ್, ಅರಸು ಮತ್ತು ಕಮಲಾದೇವಿ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆಯ ಸತ್ಯಾಂಶ ಹೊರಬಂದಿದೆ.

ತಮಿಳುನಾಡಿನ ವಿವಿಧ ಬ್ಯಾಂಕ್ ನಲ್ಲಿ ಹಣ ಠೇವಣಿ:

ಆರೋಪಿಗಳು ದೋಚಿದ್ದ ಬಂಗಾರವನ್ನು ತಮಿಳುನಾಡಿನ ವಿವಿಧ ಬ್ಯಾಂಕುಗಳಲ್ಲಿ ಒತ್ತೆ ಇಟ್ಟಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ತನಿಖಾಧಿಕಾರಿಗಳಾದ ಸಿಪಿಐ ಎಂ.ಆರ್. ಚೌಬೆ ಮತ್ತು ಪಿಎಸ್ಐ ಜಗದೀಶ್ ನೇತೃತ್ವದ ತಂಡವು ತಮಿಳುನಾಡಿಗೆ ತೆರಳಿ ಒಟ್ಟು 14 ಲಕ್ಷ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆದಿದೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಎಸ್ಪಿ ಹೆಚ್. ಟಿ. ಶೇಖರ್ ಅವರು ಅಭಿನಂದಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *