ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಇಂದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಭೇಟಿ ನೀಡಿ, ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಕ್ಷೇತ್ರದ ಉಪಚುನಾವಣಾ ಪ್ರಚಾರದ ನಡುವೆ ಮಠಕ್ಕೆ ಆಗಮಿಸಿದ ಸಮರ್ಥ್ ಅವರಿಗೆ ಶ್ರೀಗಳು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಸಮರ್ಥ್ ಅವರ ಅಜ್ಜನವರಾದ ದಿವಂಗತ ಡಾ. ಶಾಮನೂರು ಶಿವಶಂಕರಪ್ಪ ಅವರು ಮಾಡಿದ್ದ ಸುದೀರ್ಘ ಜನಸೇವೆಯನ್ನು ಸ್ಮರಿಸಿದರು. “ನಿಮ್ಮ ಅಜ್ಜ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅವರ ಹಾದಿಯಲ್ಲೇ ನೀವು ಕೂಡ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು,” ಎಂದು ಶ್ರೀಗಳು ಈ ಸಂದರ್ಭದಲ್ಲಿ ಹಿತವಚನ ನುಡಿದರು.
ತಮ್ಮ ಕುಟುಂಬ ಮತ್ತು ಮಠದ ನಡುವಿನ ದಶಕಗಳ ಸಂಬಂಧವನ್ನು ನೆನೆದ ಸಮರ್ಥ್ ಶಾಮನೂರು, ಶ್ರೀಗಳ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಈ ಭೇಟಿಯು ಚುನಾವಣಾ ಕಣದಲ್ಲಿರುವ ಯುವ ಅಭ್ಯರ್ಥಿಗೆ ಮತ್ತಷ್ಟು ಹುಮ್ಮಸ್ಸು ನೀಡಿದಂತಿದೆ.
- Davanagere Byelection 2026
- Davanagere South Congress Candidate
- Dr. Shivamurthy Shivacharya Swamiji.
- Samarth Shamanur
- Shamanur Shivashankarappa
- Sirigere Mutt
- Taralabalu Jagadguru
- ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
- ತರಳಬಾಳು ಜಗದ್ಗುರುಗಳು
- ದಾವಣಗೆರೆ ಉಪಚುನಾವಣೆ 2026
- ದಾವಣಗೆರೆ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ
- ಶಾಮನೂರು ಶಿವಶಂಕರಪ್ಪ
- ಸಮರ್ಥ್ ಶಾಮನೂರು
- ಸಿರಿಗೆರೆ ಮಠ





Leave a comment