Home ದಾವಣಗೆರೆ ಹರಿಹರ ಪಂಚಮಸಾಲಿ ಪೀಠಕ್ಕೆ ಸಮರ್ಥ್ ಶಾಮನೂರು ಭೇಟಿ: ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಾದ
ದಾವಣಗೆರೆಬೆಂಗಳೂರು

ಹರಿಹರ ಪಂಚಮಸಾಲಿ ಪೀಠಕ್ಕೆ ಸಮರ್ಥ್ ಶಾಮನೂರು ಭೇಟಿ: ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಾದ

Share
ಹರಿಹರ
Share

ದಾವಣಗೆರೆ: ಹರಿಹರದ ಪಂಚಮಸಾಲಿ ಗುರುಪೀಠಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಭೇಟಿ ನೀಡಿ ಶ್ರೀ ವಚನಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಶ್ರೀಗಳು‌ ಶಾಮನೂರು ಶಿವಶಂಕರಪ್ಪಾಜಿಯವರು ಎಲ್ಲಾ ಸಮಾಜದವರಿಗೂ ಒಂದು ರೀತಿ ನೆರಳು ಇದ್ದಂತೆ ಅವರ ಹಾದಿಯಲ್ಲಿ ನೀನು ನಡೆಯುತ್ತಿದ್ದೀಯಾ ಇದೇ ರೀತಿ ಸಮಾಜ ಸೇವೆ ಮುಂದುವರೆಸು ಎಂದು ಸಮರ್ಥ್ ಅವರಿಗೆ ಆಶೀರ್ವಾದ ಮಾಡಿದರು.

ಮುಖ್ಯಾಂಶಗಳು

  • ಗುರುಪೀಠಕ್ಕೆ ಭೇಟಿ: ಹರಿಹರದ ಪಂಚಮಸಾಲಿ ಗುರುಪೀಠಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಭೇಟಿ ನೀಡಿದರು.

  • ಆಶೀರ್ವಾದ: ಪೀಠದ ಜಗದ್ಗುರುಗಳಾದ ಶ್ರೀ ವಚನಾನಂದ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

  • ಶ್ರೀಗಳ ಹಿತವಚನ: ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪನವರ ಸಮಾಜ ಸೇವೆಯನ್ನು ನೆನಪಿಸಿದ ಶ್ರೀಗಳು, “ಅವರು ಎಲ್ಲ ಸಮಾಜದವರಿಗೂ ನೆರಳಿನಂತಿದ್ದಾರೆ, ಅವರ ಹಾದಿಯಲ್ಲೇ ನೀನು ಸಾಗು” ಎಂದು ಸಮರ್ಥ್ ಅವರಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಆರ್ .ಟಿ ಪ್ರಶಾಂತ್ ಸೇರಿದಂತೆ ಹಲವು ಮುಖಂಡರುಗಳಿದ್ದರು.

Share

Leave a comment

Leave a Reply

Your email address will not be published. Required fields are marked *