ದಾವಣಗೆರೆ: ಗುಡ್ ಫ್ರೈಡೆ ಹಿನ್ನೆಲೆಯಲ್ಲಿ ದಾವಣಗೆರೆಯ ಎಂಸಿಸಿ ಎ ಬ್ಲಾಕ್‌ನಲ್ಲಿರುವ ಚರ್ಚ್‌ಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ವಿಶೇಷ ಪ್ರಾರ್ಥನೆಗಳಲ್ಲಿ ಭಾಗವಹಿಸಿದರು.
ನಂತರ ಮಾತನಾಡಿದ ಅವರು ಪ್ರೀತಿ, ಮಮತೆ ಮತ್ತು ಕ್ಷಮೆ ಎಂಬ ಮಾನವೀಯ ಮೌಲ್ಯಗಳನ್ನು ಸಾರಿದ ಏಸು ಕ್ರಿಸ್ತನ ಬದುಕು ಎಲ್ಲರಿಗೂ ಆದರ್ಶವಾಗಲಿ. ಈ ಪವಿತ್ರ ಶುಭ ಶುಕ್ರವಾರವು ಸರ್ವರಿಗೂ ಮಂಗಳವನ್ನುಂಟು ಮಾಡಲಿ ಎಂದು ಹಾರೈಸಿದರು.
ನಂತರ ಭಾರತ್ ಕಾಲೋನಿ ಮತ್ತು ಹೆಚ್.ಕೆ.ಆರ್ ನಗರ,ಅಣ್ಣಾನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಕಾಲ್ನಡಿಗೆಯ ಮೂಲಕ ಮನೆಮನೆಗೆ ತೆರಳಿ ಕಾಂಗ್ರೆಸ್ ಗೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರೊಂದಿಗೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡರಾದ ಬಿ. ವೀರಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ಕೋರಿದರು. ನಂತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಚಾರ ನಡೆಸಿ, ಸ್ಥಳೀಯರೊಂದಿಗೆ ಸಂವಾದ ನಡೆಸಿ, ಕ್ರಮ ಸಂಖ್ಯೆ-3 ಹಸ್ತದ ಗುರುತಿಗೆ ನಿಮ್ಮ ಮತ ನೀಡಿ ನನ್ನನ್ನು ಗೆಲ್ಲಿಸಿ, ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು
ಬಳಿಕ ದಾವಣಗೆರೆಯ ಹಳೆಪೇಟೆಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ ಸಮರ್ಥ್ ಶಾಮನೂರು ಅವರು ಸ್ಥಳೀಯ ಮುಖಂಡರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
- Davanagere Congress Candidate
- Davanagere Election Campaign
- DK Shivakumar
- Door to Door Campaign
- Good Friday
- Karnataka Politics
- Lok Sabha Elections 2024
- Samarth Shamanur
- Samarth Shamanur Campaign.
- Samarth Shamanur Church Visit.
- ಗುಡ್ ಫ್ರೈಡೆ
- ಡಿ. ಕೆ. ಶಿವಕುಮಾರ್
- ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ
- ದಾವಣಗೆರೆ ರಾಜಕೀಯ
- ಮತಯಾಚನೆ
- ಲೋಕಸಭಾ ಚುನಾವಣೆ 2024
- ವೀರಭದ್ರೇಶ್ವರ ದೇವಸ್ಥಾನ
- ಸಮರ್ಥ್ ಶಾಮನೂರು
- ಹಸ್ತದ ಗುರುತು





Leave a comment