Home ದಾವಣಗೆರೆ ಅಭಿವೃದ್ಧಿ ಹಾಗೂ ಕುಂದುಕೊರತೆ ಸಲ್ಲಿಸಲು ‘Nammadvg.com’ ಆಪ್ ಬಳಸಿ: ಸಮರ್ಥ್ ಶಾಮನೂರು ಕರೆ
ದಾವಣಗೆರೆಬೆಂಗಳೂರು

ಅಭಿವೃದ್ಧಿ ಹಾಗೂ ಕುಂದುಕೊರತೆ ಸಲ್ಲಿಸಲು ‘Nammadvg.com’ ಆಪ್ ಬಳಸಿ: ಸಮರ್ಥ್ ಶಾಮನೂರು ಕರೆ

Share
ಸಮರ್ಥ್
Share

ದಾವಣಗೆರೆ: ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಆಯೋಜಿಸಲಾದ ಮಹತ್ವದ ಸಭೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಭಾಗವಹಿಸಿ ಯುವ ಸಮೂಹದೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ Nammadvg.com ಆಪ್ ಬಗ್ಗೆ ಮಾಹಿತಿ ನೀಡಿದ ಸಮರ್ಥ್ ಅವರು ಈ ಆಪ್ ನಾಗರಿಕರು ತಮ್ಮ ಸಮಸ್ಯೆಗಳನ್ನು ತಿಳಿಸಲು ಮತ್ತು ಅಭಿವೃದ್ಧಿಗೆ ಸಲಹೆ ನೀಡಲು ದಾವಣಗೆರೆ ರೂಪಿಸಿದ ಡಿಜಿಟಲ್ ವೇದಿಕೆ.

ದಾವಣಗೆರೆ ಉತ್ತರ ಮತ್ತು ದಕ್ಷಿಣ ಭಾಗದ 43 ವಾರ್ಡ್‌ಗಳು ಹಾಗೂ 13 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಗರಿಕರಿಗೆ ಈ ಆಪ್ ಉಪಯೋಗವಾಗುತ್ತದೆ. ಇದರೊಂದಿಗೆ ಆರೋಗ್ಯ ಮತ್ತು ನೈರ್ಮಲ್ಯ, ನೀರು ಸರಬರಾಜು ಇಲಾಖೆ,ಇಂಜಿನಿಯರಿಂಗ್ ವಿಭಾಗ,ವಿದ್ಯುತ್ ಇಲಾಖೆ,ಉದ್ಯಾನವನಗಳು ಮತ್ತು ವೃತ್ತಗಳು, ಪಶುಇಲಾಖೆ ಹಾಗೂ ಸರ್ಕಾರಿ ಇಲಾಖೆಗಳ ಮಾಹಿತಿಗಾಗಿ ನಾಗರಿಕರು ನೋಂದಣಿ ಮಾಡಿ ಮನವಿಯನ್ನು ಸಲ್ಲಿಸಬಹುದು

ಇದರ ಪ್ರಗತಿಯನ್ನು ಟ್ರ್ಯಾಕ್ ಮಾಡಬಹುದು ಮತ್ತು ಸಮಸ್ಯೆ ಪರಿಹಾರವಾದ ನಂತರ ರೇಟಿಂಗ್ ನೀಡಬಹುದು.ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚುತ್ತದೆ.

ಇದಲ್ಲದೇ ವಾಟ್ಸಪ್ ಗ್ರೂಪ್ ಗಳನ್ನು ರಚಿಸಿ ಇದರಲ್ಲಿಯೂ ಕುಂದುಕೊರತೆಗಳನ್ನು ತಿಳಿಸಬಹದು ಯುವಕರು ಇಂತಹ ತಾಣಗಳನ್ನು ಬಳಸಿಕೊಂಡು ಅಭಿವೃದ್ಧಿಗೆ ಸಲಹೆ ನೀಡಬೇಕು ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವರುಣ್ ಬೆಣ್ಣೆಹಳ್ಳಿ, ಉಪಾಧ್ಯಕ್ಷರುಗಳಾದ ಬಿಲಾಲ್, ಆರ್. ಚಿರಂಜೀವಿ, ರಾಜ್ಯ ಯುವ ಕಾಂಗ್ರೆಸ್ ನ ಅಬುತಾಹೀರ್, ಯುವ ಕಾಂಗ್ರೆಸ್ ಲೀಗಲ್ ಸೆಲ್ ನ ರಾಕೇಶ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಇದ್ದರು.

Share

Leave a comment

Leave a Reply

Your email address will not be published. Required fields are marked *