Home ದಾವಣಗೆರೆ ಶಿರಡಿ ಸಾಯಿಬಾಬಾ ದರ್ಶನ ಪಡೆದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು
ದಾವಣಗೆರೆಬೆಂಗಳೂರು

ಶಿರಡಿ ಸಾಯಿಬಾಬಾ ದರ್ಶನ ಪಡೆದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು

Share
ಶಿರಡಿ ಸಾಯಿಬಾಬಾ
Share

ದಾವಣಗೆರೆ: ಸರ್ವಧರ್ಮ ಸಮನ್ವಯತೆಯ ಪ್ರತೀಕವಾದ ಪವಿತ್ರಸ್ಥಳ ಶಿರಡಿ ಸಾಯಿಬಾಬಾ ದರ್ಗಾಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಭೇಟಿ ನೀಡಿ, ಬಾಬಾ ದರ್ಶನದೊಂದಿಗೆ ಆಶೀರ್ವಾದ ಪಡೆದಿದ್ದಾರೆ.

ಜಾತಿ, ಧರ್ಮ, ಭೇದಗಳನ್ನೆಲ್ಲ ಮೀರಿ, “ಎಲ್ಲರೂ ಒಂದೇ” ಎಂದು ಬೋಧಿಸಿದ ಸಾಯಿಬಾಬಾರವರ ಸನ್ನಿಧಿಯಲ್ಲಿ ನಿಂತಾಗ, ಮಾನವೀಯತೆ ಎಂಬುದೇ ಅತ್ಯಂತ ದೊಡ್ಡ ಧರ್ಮ ಎಂದು ಮನಸ್ಸು ಮತ್ತೆ ಮತ್ತೆ ನೆನಪಿಸುತ್ತದೆ.

ದರ್ಶನ ಪಡೆದ ಕ್ಷಣದಲ್ಲಿ ನಾನು ಕೇಳಿದ ಪ್ರಾರ್ಥನೆ ಒಂದೇ ನಮ್ಮ ಜೀವನದಲ್ಲಿ ಪ್ರೀತಿ ಹೆಚ್ಚಲಿ, ಮನಸ್ಸಿನಲ್ಲಿ ಶಾಂತಿ ನೆಲೆಸಲಿ, ಸಮಾಜದಲ್ಲಿ ಸಹಬಾಳ್ವೆ ಬಲವಾಗಲಿ ಎಂದು ಇದಕ್ಕೆ ಕಾರಣ ನಮ್ಮ ತಾತನವರು. ಅವರು ಕೂಡ ಸಾಯಿಬಾಬಾ ಭಕ್ತರು.ತಮ್ಮ ಜೀವನದುದ್ದಕ್ಕೂ ಪ್ರತಿ ಗುರುವಾರ ತಪ್ಪದೇ ನಮ್ಮ ಮನೆಯ ಸಮೀಪವಿರುವ ಬಾಬಾ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದರು. ಅವರ ಜೊತೆಗೆ ನಾನು ಕೂಡ ಭೇಟಿ ನೀಡುತ್ತಿದ್ದ ನೆನೆಪು ಮರುಕಳಿಸಿತು ಎಂದು ತಮ್ಮ ಸಾಮಾಜಿಕ ಜಾಲತಾಣವಾದ “x” ಸೇರಿದಂತೆ ಎಲ್ಲೆಡೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *