Home ದಾವಣಗೆರೆ ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡುವುದು ನನ್ನ ಮೊದಲ ಆದ್ಯತೆ: ಸಮರ್ಥ್ ಶಾಮನೂರು
ದಾವಣಗೆರೆಬೆಂಗಳೂರು

ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡುವುದು ನನ್ನ ಮೊದಲ ಆದ್ಯತೆ: ಸಮರ್ಥ್ ಶಾಮನೂರು

Share
ಜನರ
Share

ದಾವಣಗೆರೆ: ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡುವುದು ನನ್ನ ಮೊದಲ ಆದ್ಯತೆ. ಹಿರಿಯರ ಆಶೀರ್ವಾದ ಹಾಗೂ ಯುವಕರ ಬೆಂಬಲದಿಂದ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ನನ್ನ ಗುರಿಯಾಗಿದೆ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ವಿಧಾನಸಭಾ ಕ್ಷೇತ್ರದ ಶೇಖರಪ್ಪ ನಗರ, ಆರ್‌ಎಂಸಿ ಲಿಂಕ್ ರಸ್ತೆ, ವಿನಾಯಕನಗರ, ದೇವರಾಜ ಅರಸು ಬಡಾವಣೆ, ಬಂಬೂಬಜಾರ್,ಚೌಕಿಪೇಟೆ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು, ಗ್ಯಾರಂಟಿ ಯೋಜನೆಗಳ ಮೂಲಕ ಜನರ ಜೀವನ ಸುಧಾರಿಸಿದೆ. ಮುಂದುವರಿದ ಅಭಿವೃದ್ಧಿಗಾಗಿ ಕ್ರಮಸಂಖ್ಯೆ 3 ಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

ಮಹಾವೀರ ಜಯಂತಿ ಅಂಗವಾಗಿ ಚೌಕಿಪೇಟೆಯಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ ಅವರು, ಅಹಿಂಸೆ, ಸತ್ಯ ಮತ್ತು ಸಹನೆಯ ಮೌಲ್ಯಗಳನ್ನು ಪಾಲಿಸುವಂತೆ ಕರೆ ನೀಡಿದರು. ನನ್ನ ತಾತನವರ ಮಾರ್ಗದರ್ಶನದಂತೆ ಜನಸೇವೆ  ಮುಂದುವರಿಸುತ್ತೇನೆ. ಏಪ್ರಿಲ್ 9 ರಂದು ನಡೆಯುವ ಉಪಚುನಾವಣೆಯಲ್ಲಿ ಆಶೀರ್ವಾದಿಸಿ ಗೆಲ್ಲಿಸಿ ಎಂದು ಸಮರ್ಥ್ ಶಾಮನೂರು ಮನವಿ ಮಾಡಿದರು

ಈ ವೇಳೆ ಸ್ಥಳೀಯ ಮುಖಂಡರು,ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *